ದರ್ಶನ್ ಪರ ವಕೀಲರಿಂದ ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಕೆ – ವರದಿಯಲ್ಲಿ ಏನಿದೆ?

Public TV
2 Min Read

ಬೆಂಗಳೂರು: ನಟ ದರ್ಶನ್‌ಗೆ (Actor Darshan) ಚಿಕಿತ್ಸೆ ಮುಂದುವರೆದಿದ್ದು, ಇಂದು (ನ.6) ದರ್ಶನ್ ಪರ ವಕೀಲರು ಒಂದು ವಾರದ ಮೆಡಿಕಲ್ ರಿಪೋರ್ಟ್‌ನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಹಿನ್ನೆಲೆ ಜೈಲಿನಲ್ಲಿದ್ದ ದರ್ಶನ್‌ಗೆ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದಂತೆ 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ. ಇದೀಗ ಬೆನ್ನು ನೋವಿಗಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಒಂದು ವಾರದಲ್ಲಿ ದರ್ಶನ್‌ಗೆ ನೀಡಲಾಗುವ ಚಿಕಿತ್ಸೆಯ ವರದಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ (High Court) ಸಲ್ಲಿಸಿದ್ದಾರೆ.ಇದನ್ನೂ ಓದಿ: ಶಿರೂರು ಗ್ರಾಮದ ವಸತಿ ಶಾಲೆ, 1,200 ಆಶ್ರಯ ಮನೆಗಳೆಲ್ಲವೂ ವಕ್ಫ್‌ ಆಸ್ತಿ – ಇಸ್ಲಾಮಿಯಾ ತಂಜೀಮ್ ಸಮಿತಿ ಪಟ್ಟು

ಇನ್ನೂ ಬಿಜಿಎಸ್ ವೈದ್ಯರು ಆಪರೇಷನ್‌ಗೆ ಸಲಹೆ ನೀಡಿದ್ದರೂ ಅದಕ್ಕೆ ದರ್ಶನ್ ನಿರಾಕರಿಸಿದ್ದಾರೆ. ಈ ಹಿಂದೆ ಫ್ಯಾಕ್ಚರ್ ಆಗಿರೋದು ಒಂದು ಸಮಸ್ಯೆ ಇದೆ. ಆಪರೇಷನ್ ಮಾಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ದರ್ಶನ್ ಬೇಡ ಎಂದಿದ್ದು, ಕನ್ಸರ್ವೇಟಿವ್ ಟ್ರೀಟ್‌ಮೆಂಟ್ ಶುರು ಮಾಡಲಾಗಿದೆ.

10 ರಿಂದ 15 ದಿನಗಳ ಕಾಲ ಕನ್ಸರ್ವೇಟಿವ್ ಚಿಕಿತ್ಸೆ ನೀಡಲಾಗುತ್ತದೆ. ಫಿಜಿಯೋಥೆರಪಿ, ವ್ಯಾಯಾಮ, ಔಷಧಿ, ಎಕ್ಸ್ಸೈಸ್ ಮೂಲಕ ಗುಣಮುಖ ಮಾಡುವ ಪ್ರಯತ್ನ ನಡೆಯುತ್ತದೆ. ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಗುಣಮುಖ ಆಗದಿದ್ದರೆ ಆಪರೇಷನ್ ಮಾಡಲು ನಿರ್ಧರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಏನಿದೆ?
ದರ್ಶನ್‌ಗೆ ಚಿಕಿತ್ಸೆ ನೀಡುವ ಬಗ್ಗೆಗಿನ ವರದಿಯನ್ನು ದರ್ಶನ್ ಪರ ವಕೀಲರು ಹೈಕೋರ್ಟ್ ಸಲ್ಲಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಮೊದಲ ವಾರದ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಇಂದು ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದಾರೆ.

ಸದ್ಯ ದರ್ಶನ್‌ಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಫಿಸಿಯೋಥೆರಫಿಯೇ ಅಂತಿಮ ಅಲ್ಲ ಎನ್ನಿಸುತ್ತಿದೆ. ಫಿಸಿಯೋಥೆರಫಿಯಲ್ಲಿ ಗುಣಮುಖ ಆಗದಿದ್ದಲ್ಲಿ ಸರ್ಜರಿ ಮಾಡಲಾಗುವುದು. ರೋಗಿಗೆ ಶಸ್ತ್ರಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನೂ ಶಸ್ತ್ರಚಿಕಿತ್ಸೆಗೆ ದರ್ಶನ್ ಒಪ್ಪಿಗೆ ಸೂಚಿಸಿಲ್ಲ. ದರ್ಶನ್ ಒಪ್ಪಿಕೊಂಡಲ್ಲಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗುವುದು ಎಂಬ ವಿಚಾರ ವರದಿಯಲ್ಲಿದೆ ಎನ್ನಲಾಗುತ್ತಿದೆ.

ಬೆನ್ನು ನೋವಿನ ಕಾರಣ ನಟ ದರ್ಶನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಈವರೆಗಿನ ಚಿಕಿತ್ಸೆ ಮತ್ತು ಮುಂದಿನ ಪ್ರಕ್ರಿಯೆಗಳ ಬಗ್ಗೆ ದರ್ಶನ್ ಪರ ವಕೀಲರು ಇಂದು ಹೈಕೋರ್ಟ್ಗೆ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ. ಇದರ ಪ್ರಕಾರ, ದರ್ಶನ್‌ಗೆ ಸರ್ಜರಿ ಮಾಡುವ ಬಗ್ಗೆ ವೈದ್ಯರು ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಫಿಸಿಯೋಥೆರಪಿ ಮಾಡಲಾಗ್ತಿದೆ. ಇದರಿಂದ ಗುಣಮುಖ ಆಗದಿದ್ರೆ ಸರ್ಜರಿ ಬಗ್ಗೆ ನಿರ್ಧಾರ ಮಾಡ್ತೀವಿ. ಒಂದೊಮ್ಮೆ ದರ್ಶನ್ ಒಪ್ಪಿಕೊಂಡ್ರೆ ಸರ್ಜರಿ ಮಾಡ್ತೀವಿ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಚಲಾಯಿಸುತ್ತಿರುವಾಗಲೇ ಹೃದಯಾಘಾತ – ಬಿಎಂಟಿಸಿ ಚಾಲಕ ಸಾವು

Share This Article