ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ

Public TV
1 Min Read

ಚಿತ್ರದುರ್ಗ: ಪುತ್ರನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan) ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಕಾಶಿನಾಥ್‌ ಶಿವನಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ (Renukaswamy Case) ತಂದೆ ಕಾಶಿನಾಥ್‌, ತೀರ್ಪು ಏನಾಗುತ್ತೋ ಎಂಬ ಆತಂಕ ಇತ್ತು. ಜಾಮೀನು ರದ್ದಿನಿಂದ ನಂಬಿಕೆ ಬಂದಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಪುತ್ರನ ನೆನೆದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್

ಸರ್ಕಾರ ಕಾನೂನಿನ ಬಗ್ಗೆ ನಂಬಿಕೆ, ವಿಶ್ವಾಸ ಮೂಡಿದೆ. ಅಪರಾಧಿಗಳಿಗೆ ಶಿಕ್ಷೆ ಆಗುವ ಭರವಸೆ ಇದೆ. ಸೊಸೆಯ ಕೆಲಸದ ಬಗ್ಗೆ ನೋವಿದೆ. ಕೆಲಸ ಕೊಡುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸುಪ್ರಿಂ ಕೋರ್ಟ್‌ನಿಂದ ನ್ಯಾಯ ಸಾಭೀತಾಗಿದೆ. ಮಗನ ಕಳೆದುಕೊಂಡು ಆತಂಕದಲ್ಲಿದ್ದೆವು. ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ. ಸರ್ಕಾರ, ನ್ಯಾಯಾಂಗವನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ VIP ಟ್ರೀಟ್‌ಮೆಂಟ್ ಕೊಟ್ರೆ ಹುಷಾರ್ – ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ

ಮೊಮ್ಮಗ, ಸೊಸೆಗೆ ಆಧಾರವಾಗಲೆಂದು ಪೂಜೆ ಸಲ್ಲಿಕೆ ಮಾಡಿದ್ದೆವು. ತೀರ್ಪು ವಿಳಂಬವಾಗಬಹುದು ಅಂತ ಪೂಜೆ ಸಲ್ಲಿಸ್ತಿದೆ. ಬೇಗ ತೀರ್ಪು ಹೊರಬಂದಿದೆ. ಗುರುಗಳು, ದೇವರ ಅನುಗ್ರಹದಿಂದ ಒಳ್ಳೆಯದು ಆಗಿದೆ ಎಂದಿದ್ದಾರೆ.

Share This Article