ಮೈಸೂರು: ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗುತ್ತಿದ್ದಂತೆ ಮೈಸೂರಿನಲ್ಲಿರುವ ದರ್ಶನ್ (Darshan) ಮನೆ, ಫಾರ್ಮ್ ಹೌಸ್‌ಗೆ ಪೊಲೀಸರು ದೌಡಾಯಿಸಿದ್ದಾರೆ.
ಮೈಸೂರಿನಲ್ಲಿನ ನಟ ದರ್ಶನ್ ಮನೆ ಮುಂದೆ ಪೊಲೀಸರ ಬೀಟ್ ಆರಂಭವಾಗಿದೆ. ಮನೆಯಲ್ಲಿ ಸದ್ಯ ದರ್ಶನ್ ತಾಯಿ ಮಾತ್ರ ಇದ್ದಾರೆ. ಮನೆಯ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿದೆ. ಗೇಟ್‌ನ ಬೀಗ ಹಾಕಿಕೊಂಡು ದರ್ಶನ್ ತಾಯಿ ಮನೆ ಒಳಗೆ ಇದ್ದಾರೆ. ಹೊರಗಡೆ ಪೊಲೀಸ್ ಬೀಟ್ ಶುರುವಾಗಿದೆ. ಇದನ್ನೂ ಓದಿ: ಕೊಲೆ ಕೇಸಲ್ಲಿ ಜಾಮೀನು ರದ್ದು – ಮತ್ತೆ ಜೈಲಿಗೆ ದರ್ಶನ್
ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಗುರುವಾರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಸುಪ್ರೀಂ ಕಟ್ಟಾಜ್ಞೆ ಹೊರಡಿಸಿದೆ. ಇದರ ಬೆನ್ನಲ್ಲೇ ದರ್ಶನ್ ಸೇರಿದಂತೆ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ನಟ ದರ್ಶನ್‌ಗೆ ಪೊಲೀಸರು ಹುಡಕಾಟ ನಡೆಸಿದ್ದಾರೆ. ಆದರೆ, ನಟ ಎಲ್ಲಿದ್ದಾರೆಂಬುದು ಇನ್ನೂ ಗೊತ್ತಾಗಿಲ್ಲ. ಎಲ್ಲಾ ಕಡೆ ದರ್ಶನ್‌ಗಾಗಿ ತೀವ್ರ ಶೋಧ ನಡೆಯುತ್ತಿದೆ. ಇದನ್ನೂ ಓದಿ: ದರ್ಶನ್‌ಗೆ VIP ಟ್ರೀಟ್‌ಮೆಂಟ್ ಕೊಟ್ರೆ ಹುಷಾರ್ – ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ