ನಟ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ? – ವೈದ್ಯರಿಂದ ಫಿಸಿಯೊಥೆರಪಿ ಸ್ಟಾಪ್!

1 Min Read

– 10-12 ಕೆಜಿ ತೂಕ ಕಳೆದುಕೊಂಡಿದ್ದಾರಂತೆ ದರ್ಶನ್‌

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ (Darshan) ಬೆನ್ನು ನೋವು ಮಾಯವಾಗೇಬಿಡ್ತಾ ಅನ್ನೋ ಕುತೂಹಲ ಮೂಡಿದೆ.

ಹೌದು. ದರ್ಶನ್‌ ಬೆನ್ನುನೋವಿಗೆ ಫಿಸಿಯೊಥೆರಪಿ (Physiotherapy) ಬೇಕಿಲ್ಲ ಅಂತಾ ಸಿ.ವಿ ರಾಮನ್ ಆಸ್ಪತ್ರೆ ವೈದ್ಯರ ತಂಡದಿಂದ ಜೈಲಾಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂಬ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಿಗರೇಟ್‌ ಪ್ಯಾಕ್‌, ಮಾದಕ ವಸ್ತು ಪತ್ತೆ – ಪರಪ್ಪನ ಅಗ್ರಹಾರ ಜೈಲು ವಾರ್ಡರ್ ಅರೆಸ್ಟ್

ದರ್ಶನ್‌ ರೇಣುಕಾಸ್ವಾಮಿ ಪ್ರಕರಣದಲ್ಲಿ ಮೊದಲಬಾರಿಗೆ ಜೈಲು ಸೇರಿದ್ದಾಗ ಇದೇ ವಿಷಯದಲ್ಲಿ ಜಾಮೀನು ಪಡೆದಿದ್ದರು. ಬೆನ್ನುನೋವು ಜಾಸ್ತಿ ಇದೆ, ನಿಲ್ಲೋಕೂ ಆಗ್ತಿಲ್ಲ ಕೂರೋಕು ಆಗ್ತಿಲ್ಲ. ಚಿಕಿತ್ಸೆಗೆ ಅವಕಾಶ ಕೊಡಿ ಅಂತ ಕೋರ್ಟ್ ಮೋರೆ ಹೋಗಿದ್ದರು. ಕೋರ್ಟ್‌ ಮೊದಲಿಗೆ ಮೆಡಿಕಲ್‌ ಬೇಲ್‌ ಮಂಜೂರು ಮಾಡಿತ್ತು. 2ನೇ ಬಾರಿ ದರ್ಶನ್‌ ಪರಪ್ಪನ ಅಗ್ರಹಾರ ಸೇರಿದಾಗಲೂ ದರ್ಶನ್‌ ಅದೇ ಸಮಸ್ಯೆ ಹೇಳಿದ್ದರು. ಆದ್ರೆ ಜಾಮೀನಿಗೆ ಒಪ್ಪದ ಕೋರ್ಟ್‌ ಜೈಲಿನಲ್ಲೇ ಚಿಕಿತ್ಸೆ ಪಡೆಯಲು ಅನುಮತಿ ನೀಡಿತ್ತು.

ಅದರಂತೆ ಸಿ.ವಿ ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರ ತಂಡದಿಂದ ಫಿಸಿಯೋ ಮಾಡಲಾಗುತ್ತಿತ್ತು. ವಾರಕ್ಕೆ ಎರಡು ಅಥವಾ ಮೂರು ಬಾರಿ ಫಿಸಿಯೋಥೆರಫಿ ಮಾಡಲಾಗ್ತಿತ್ತು. ತಪಾಸಣೆ ಬಳಿಕ ವರದಿ ಸಲ್ಲಿಸಿಕೆ ಮಾಡಿರುವ ವೈದ್ಯರ ತಂಡ ದರ್ಶನ್‌ಗೆ ಫಿಸಿಯೋ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರಂತೆ. ವೈದ್ಯರ ಶಿಫಾರಸಿನ ಆಧಾರದ ಮೇಲೆ ಫಿಸಿಯೋಗೆ ಜೈಲಾಧಿಕಾರಿಗಳು ಕರೆದುಕೊಂಡು ಹೋಗ್ತಿಲ್ಲ. ಇನ್ನೂ ಫಿಸಿಯೊ ಬಗ್ಗೆ ದರ್ಶನ್ ಯಾವುದೇ ಚಕಾರ ಎತ್ತಿಲ್ಲ ಅಂತಾ ಸಹ ಕಾಣ್ತಿದೆ. ಸದ್ಯ ಜೈಲಲ್ಲಿ ದರ್ಶನ್ ದಿನಕ್ಕೆ ಒಂದೇ ಊಟ ಮಾಡ್ತಿದ್ದಾರಂತೆ.

ಇನ್ನೂ ಎರಡನೇ ಬಾರಿ ಜೈಲು ಸೇರಿದ ಬಳಿಕ 10 ರಿಂದ 12 ಕೆಜಿ ತೂಕ ಕಳೆದುಕೊಂಡಿದ್ದಾರೆ. ಇದು ಸಹಜವಾಗಿ ಬೆನ್ನು ನೋವು ಶಮನವಾಗಿರೊ ಸಾಧ್ಯತೆ ಇದೆ ಎಂದು ಜೈಲಾಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪುಟಿನ್‌ಗೆ ಭಾರತದಲ್ಲಿ ಭವ್ಯ ಸ್ವಾಗತ – ಟ್ರಂಪ್‌ಗೆ ನೊಬೆಲ್‌ ಸಿಗಬೇಕು: ಪೆಂಟಗನ್‌ ನಿವೃತ್ತ ಅಧಿಕಾರಿ ವ್ಯಂಗ್ಯ

Share This Article