ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ದರ್ಶನ್

Public TV
1 Min Read

ಹಿರಿಯ ನಟಿ ಲೀಲಾವತಿ (Leelavathi) ಅವರ ಮನೆಗೆ ಇಂದು (ನ.26) ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಭೇಟಿ ನೀಡಿದ್ದಾರೆ. ನಟಿ ಲೀಲಾವತಿ ಅವರನ್ನ ದರ್ಶನ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ವಯಸ್ಸಿನ ಕಾರಣದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಮನೆಗೆ ನಟ ದರ್ಶನ್ ಭೇಟಿ ನೀಡಿ ವಿನೋದ್ ರಾಜ್ (Vinod Raj) ಬಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಕೆಲ ಹೊತ್ತು ಲೀಲಾವತಿ ಅವರ ಮನೆಯಲ್ಲಿದ್ದು ವಿನೋದ್ ರಾಜ್ ಬಳಿ ಸಾಕಷ್ಟು ವಿಚಾರಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಇದನ್ನೂ ಓದಿ:ರಿವೀಲ್‌ ಆಯ್ತು ‘ಅಧಿಪತ್ರ’ ಸಿನಿಮಾದಲ್ಲಿನ ರೂಪೇಶ್‌ ಶೆಟ್ಟಿ ಲುಕ್‌

ಇತ್ತೀಚಿನ ದಿನಗಳಲ್ಲಿ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರಳಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಕೂಡ ಇತ್ತೀಚೆಗೆ ಅದೇ ಕೆಲಸ ಮಾಡಿದ್ದರು. 87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

ಅಂದಹಾಗೆ ಇಂದು (ನ.26) ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟನೆ ಆಗಿದೆ. ಸರಳವಾಗಿ ಈ ಸಮಾರಂಭ ಜರುಗಿದೆ.

Share This Article