‘ಡೆವಿಲ್’ ಚಿತ್ರೀಕರಣ ಆರಂಭಕ್ಕೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ದಾಸ

By
1 Min Read

– ಜೈಲಿಂದ ಹೊರಬಂದ ಬಳಿಕ ಶೂಟಿಂಗ್‌ನಲ್ಲಿ ದರ್ಶನ್ ಭಾಗಿ

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಂದ ಹೊರಬಂದ ನಟ ದರ್ಶನ್ (Darshan) ಎಂಟು ತಿಂಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದ ಕಾರಣ ಅರ್ಧಕ್ಕೆ ನಿಂತು ಹೋಗಿದ್ದ ‘ಡೆವಿಲ್’ ಚಿತ್ರದ (Devil Cinema) ಚಿತ್ರೀಕರಣ ಮೈಸೂರಿನಲ್ಲಿ (Mysuru) ಇಂದಿನಿಂದ ಶುರುವಾಗಿದೆ. ಈ ಹಿನ್ನೆಲೆ ಚಿತ್ರೀಕರಣ ಆರಂಭಕ್ಕೂ ಮುನ್ನ ದರ್ಶನ್ ದೇವರ ಮೊರೆ ಹೋಗಿದ್ದಾರೆ.

8 ತಿಂಗಳ ಬಳಿಕ ‘ಡೆವಿಲ್’ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ದರ್ಶನ್ ಶೂಟಿಂಗ್‌ಗೂ ಮುನ್ನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ದರ್ಶನ್ ಆಗಮಿಸಿದ್ದಾರೆ. ಇದನ್ನೂ ಓದಿ: ನಟಿ ರನ್ಯಾ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್

ಮಾರ್ಚ್ 12ರಿಂದ 15ರವರೆಗೆ ಶೂಟಿಂಗ್‌ಗೆ ಅನುಮತಿ ಸಿಕ್ಕಿದೆ. ಇಂದಿನಿಂದ ಮಾ.14ರ ವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ‘ಡೆವಿಲ್’ ಶೂಟಿಂಗ್ ನಡೆಯಲಿದ್ದು, ಮಾ.15ರಂದು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಶೂಟಿಂಗ್ ನಡೆಯಲಿದೆ. ಖಾಸಗಿ ಭದ್ರತಾ ಪಡೆ ಹಾಗೂ ಪೊಲೀಸ್ ಪಡೆ ಎರಡನ್ನೂ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೆಸ್ಟ್‌ ಆಕ್ಟಿಂಗ್‌ ಆಸ್ಕರ್‌ ಅವಾರ್ಡ್‌ ಯಾರಿಗೆ ಹೋಗುತ್ತೆ ಅಂದ್ರೆ.. – ದರ್ಶನ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್

Share This Article