ಕೈದಿ ನಂಬರ್‌ ಆಯ್ತು.. ಈಗ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಟ್ರೆಂಡ್‌

Public TV
1 Min Read

– ನೆಚ್ಚಿನ ನಟ ಬಳ್ಳಾರಿ ಜೈಲಿಗೆ ಹೋಗುವಾಗ ಹಾಕಿದ್ದ ಟೀ ಶರ್ಟ್‌ ಧರಿಸಿ ಅಭಿಮಾನಿಗಳ ಫೋಟೊಶೂಟ್‌

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದರೂ ಅಭಿಮಾನಿಗಳು ಮಾತ್ರ ಒಂದಲ್ಲ ಒಂದು ರೀತಿಯಲ್ಲಿ ನೆಚ್ಚಿನ ನಟನ ಬಗ್ಗೆ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಕೈದಿ ನಂಬರ್‌ ಆಯ್ತು. ಈಗ ದರ್ಶನ್‌ ಧರಿಸಿದ್ದ ಮಾದರಿಯ ಟೀ ಶರ್ಟ್‌ ಟ್ರೆಂಡ್‌ ಆಗಿದೆ. ದರ್ಶನ್‌ ಧರಿಸಿದ್ದ ಮಾದರಿಯ ಟೀ ಶರ್ಟ್‌ ಧರಿಸಿ ಅಭಿಮಾನಿಗಳು ಫೋಟೋಶೂಟ್‌ ಮಾಡಿಸಿರುವುದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಾಗ ಆರೋಪಿ ದರ್ಶನ್‌, ಪೂಮಾ ಟೀ ಶರ್ಟ್ ಧರಿಸಿದ್ದರು. ಅದೆ ಮಾದರಿಯ ಟಿ ಶರ್ಟ್ ಧರಿಸಿ ಅಭಿಮಾನಿಗಳು ಫೋಟೋಶೂಟ್‌ ಮಾಡಿಸಿದ್ದಾರೆ. ಏಳು ಜನರ ತಂಡ ದರ್ಶನ್ ಧರಿಸಿದ ಕಪ್ಪು ಬಣ್ಣದ ಪೂಮಾ ಟೀ ಶರ್ಟ್ ಧರಿಸಿ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ ಆರಂಭದಲ್ಲಿ, ಜೈಲಿನಲ್ಲಿ ಅವರಿಗೆ ನೀಡಿದ್ದ ಕೈದಿ ನಂಬರ್‌ ಟ್ರೆಂಡ್‌ ಆಗಿತ್ತು. ಅಭಿಮಾನಿಗಳು ದರ್ಶನ್‌ ಕೈದಿ ಸಂಖ್ಯೆ 6106 ಸ್ಟಿಕ್ಕರ್‌ ಬೈಕ್‌ ಹಾಗೂ ವಾಹನಗಳಿಗೆ ಅಂಟಿಸಿ ಟ್ರೆಂಡ್‌ ಸೃಷ್ಟಿಸಿದ್ದರು. ಕೆಲವರು ಕೈದಿ ನಂಬರ್‌ ಅನ್ನು ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದರು. ಅದೇ ರೀತಿ ಈಗ ಟೀ ಶರ್ಟ್‌ ಟ್ರೆಂಡ್‌ ಶುರುವಾಗಿದೆ.

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೈಲು ಸೇರಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ವಿಚಾರ ಭಾರಿ ವಿವಾದಕ್ಕೆ ಕಾರಣವಾಯಿತು. ಇದರ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಯಿತು. ಸದ್ಯ ಆರೋಪಿ ದರ್ಶನ್‌ ಬಳ್ಳಾರಿ ಜೈಲಿನಲ್ಲಿದ್ದಾರೆ.

Share This Article