– ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ವಿಚಾರ; ಸೆ.9ಕ್ಕೆ ಕೋರ್ಟ್ ತೀರ್ಪು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡುವಂತೆ ಸಲ್ಲಿಸಿದ್ದ ಅರ್ಜಿ ಹಾಗೂ ದರ್ಶನ್‌ಗೆ (Darshan) ಬೆಡ್‌ಶೀಟ್, ತಲೆ ದಿಂಬು ಸೇರಿದಂತೆ ಅಗತ್ಯ ವಸ್ತುಗಳನ್ನ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಿಸಿಹೆಚ್ 64ರ ನ್ಯಾಯಾಲಯದಲ್ಲಿ ನಡೆದಿದ್ದು, ಸೆ.9ಕ್ಕೆ ಕೋರ್ಟ್ ತೀರ್ಪು ಪ್ರಕಟವಾಗಲಿದೆ.
ನಟ ದರ್ಶನ್ ಸೇರಿದಂತೆ ಐವರು ಆರೋಪಿಗಳನ್ನ ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡುವಂತೆ ಸಲ್ಲಿಸಿದ್ದ ಅರ್ಜಿ ಹಾಗೂ ದರ್ಶನ್‌ಗೆ ಅಗತ್ಯ ವಸ್ತುಗಳನ್ನ ನೀಡುವಂತೆ ಜೈಲಾಧಿಕಾರಿಗೆ ನಿರ್ದೇಶಿಸುವಂತೆ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಿಸಿಹೆಚ್ 64ರಲ್ಲಿ ನಡೀತು. ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿದ್ದು, ಪ್ರಿಸನ್ಸ್ ಆ್ಯಕ್ಟ್, ವೀಡಿಯೋ ಕಾನ್ಫರೆನ್ಸ್ ಆ್ಯಕ್ಟ್, ಮಾನವ ಹಕ್ಕುಗಳ ಕಾಯ್ದೆಗಳ ಆಧಾರದ ಮೇಲೆ ವಾದ ಮಂಡಿಸಿದ್ದು, ಇದೇ ತಿಂಗಳ 9ರಂದು ಎರಡೂ ಅರ್ಜಿಗಳ ಆದೇಶ ಕಾಯ್ದಿರಿಸಲಾಗಿದೆ. ಇದನ್ನೂ ಓದಿ: ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನಕ್ಕೆ ಈಶ್ವರ್ ಖಂಡ್ರೆ ಚಾಲನೆ
ದರ್ಶನ್ ಪರ ವಕೀಲರ ವಾದದ ಹೈಲೈಟ್ಸ್:
* ಮರಣದಂಡನೆ, ಜೀವಾವಧಿ ಶಿಕ್ಷೆ, ದಂಡದ ಮೊತ್ತ ಪಾವತಿಸದವರು, ಹಾಗೂ ದುರ್ನಡತೆ ತೋರಿದವರಿಗೆ ಮಾತ್ರ ಬೇರೆ ಜೈಲಿಗೆ ಶಿಫ್ಟ್ ಮಾಡಲು ಅವಕಾಶವಿದೆ. ದರ್ಶನ್ ಆ ಕೆಟಗರಿಯಲ್ಲಿ ಬರೋದಿಲ್ಲ.
* ಪ್ರಿಸನ್ಸ್ ಆ್ಯಕ್ಟ್ ಸೆಕ್ಷನ್ 8 ಮತ್ತು ಚಾಪ್ಟರ್ 30ರಡಿ ಬೇರೆ ಜೈಲಿಗೆ ಶಿಫ್ಟ್ ಮಾಡುವಂತಿಲ್ಲ.
* ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ಸಂಪರ್ಕ ಸಾಧಿಸಿ ಸಿಗರೇಟ್ ಸೇದಿದ್ರು ಅಂತಾ ಕಾರಣ ನೀಡಿದ್ದಾರೆ.
* ಹಾಗಾದ್ರೆ ಜೈಲೊಳಗೆ ಸಿಗರೇಟ್, ಚೇರ್ ಹೇಗೆ ಬಂತು? ದುಡ್ಡು ತಗೊಂಡು ಇವರೇ ಬಿಡ್ತಾರೆ.
* ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಅಸಾಧ್ಯವಿದೆ – ವಿಸಿ ರೂಲ್ಸ್ ಬಗ್ಗೆ ಎಸ್‌ಪಿಪಿ ತಪ್ಪು ಮಾಹಿತಿ ನೀಡಿದ್ದಾರೆ.
* ದರ್ಶನ್‌ನ ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗುತ್ತಿದೆ.
* ಜೈಲ್ ಮ್ಯಾನ್ಯುಯಲ್ ಪ್ರಕಾರ ಹಾಸಿಗೆ ದಿಂಬು, ಬೆಡ್‌ಶೀಟ್, ನೈಟ್ ಡ್ರೆಸ್, ಚಪ್ಪಲಿ, ಬಾಚಣಿಗೆ ನೀಡಬೇಕು, ಆದ್ರೆ ನೀಡಿಲ್ಲ.
* ದರ್ಶನ್‌ಗೆ ಹೆಂಡ್ತಿ ಮಕ್ಕಳನ್ನ ನೋಡೋಕೆ ಬಿಟ್ಟಿಲ್ಲ. ಲಾಯರ್ ಬಂದ್ರೆ ಮಂಕಿ ಕ್ಯಾಪ್ ಹಾಕೊಂಡು ಬನ್ನಿ ಅಂತಾರೆ. ತಿಂಗಳಿಂದ ಸೂರ್ಯನನ್ನ ನೋಡಿಲ್ಲ. ಅವ್ರ ಕೈನ ಹೆಬ್ಬೆರಳು ಸ್ಪರ್ಷ ಕಳೆದುಕೊಂಡಿವೆ.
* ದರ್ಶನ್‌ನ ಯಾರೂ ಮೀಟ್ ಮಾಡಬಾರದು, ಮಾತಾಡಿಸಬಾರದು ಅಂತಾ ಬಾಡಿ ವೋರ್ನ್ ಕ್ಯಾಮೆರಾ ಹಾಕಿಸಿದ್ದಾರೆ.
* ಇದಕ್ಕೆಲ್ಲಾ ಕಾರಣ ಎಡಿಜಿಪಿ ದಯಾನಂದ್, ದರ್ಶನ್‌ಗೆ ಸೆಲೆಬ್ರಿಟಿ ಸ್ಟೇಟಸ್ ಹೋಗ್ಬೇಕು ಅಂತಾ ಅಧಿಕಾರಿಗಳನ್ನ ಕರೆದು ವಾರ್ನ್ ಮಾಡಿದ್ದಾರೆ.
* ಪ್ರಜ್ವಲ್ ರೇವಣ್ಣ, ಎನ್‌ಐಎ ಕೇಸ್‌ನ ಆರೋಪಿ ಡಾಕ್ಟರ್‌ಗೆ ಇಲ್ಲದ ರೂಲ್ಸ್ ದರ್ಶನ್ ಗೆ ಯಾಕೆ?
* ಕಾನೂನಿನಲ್ಲಿ ಬಟ್ಟೆ, ಬೆಡ್‌ಶೀಟ್, ದಿಂಬು ನೀಡಲು ಅವಕಾಶವಿದೆ.
ಎರಡೂ ಅರ್ಜಿಗಳ ವಾದವನ್ನ ಪುರಸ್ಕರಿಸುವಂತೆ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡಿಸಿದ್ದಾರೆ. ಎರಡು ಕಡೆಯ ವಾದ ಆಲಿಸಿದ ಕೋರ್ಟ್ ಸೆ.9 ರಂದು ತೀರ್ಪು ಪ್ರಕಟಿಸಲಿದೆ. ಅಂದು ದರ್ಶನ್‌ಗೆ ಪರಪ್ಪನ ಅಗ್ರಹಾರಾನಾ? ಬಳ್ಳಾರಿ ಜೈಲಾ? ಬೆಡ್‌ಶೀಟ್ ದಿಂಬು ನೀಡಬೇಕಾ ಬೇಡ್ವಾ ಅಂತಾ ತೀರ್ಪು ಹೊರಬೀಳಲಿದೆ. ಇದನ್ನೂ ಓದಿ: PUBLiC TV Impact | ಸರ್ಕಾರದ ದುಡ್ಡನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದ ಪಿಡಿಓ ಅಮಾನತು