ರಾಜ್‌ಕುಮಾರ್ ಕಾಲು ಧೂಳಿಗೂ ನಾವು ಸಮ ಅಲ್ಲ- ದರ್ಶನ್

Public TV
2 Min Read

ರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸ ವರ್ಷದ ಶುಭಾರಂಭದ ದಿನವೇ ಕಾಟೇರ ಚಿತ್ರದ ಸಕ್ಸಸ್ ಹಬ್ಬವನ್ನು ಚಿತ್ರತಂಡ ಸಂಭ್ರಮಿಸಿದ್ದಾರೆ. ದರ್ಶನ್ ನಟನೆಯನ್ನು ಡಾ.ರಾಜ್‌ಕುಮಾರ್ (Rajkumar) ಅವರಿಗೆ ಹೋಲಿಸಿದವರಿಗೆ ಅವರ ಕಾಲು ಧೂಳಿಗೂ ನಾವು ಸಮ ಅಲ್ಲ ಎಂದು ದರ್ಶನ್ (Darshan)ಮಾತನಾಡಿದ್ದಾರೆ.

‘ಕಾಟೇರ’ (Katera) ಸಿನಿಮಾದಲ್ಲಿನ ಕಥೆ ಮತ್ತು ದರ್ಶನ್ ಖಡಕ್ ನಟನೆಯನ್ನ ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅವರನ್ನ ಹೋಲಿಸಿ ದರ್ಶನ್ ನಟನೆಯನ್ನು ಹೊಗಳಿದ್ದಕ್ಕೆ ಡಿಬಾಸ್ ರಿಯಾಕ್ಟ್ ಮಾಡಿದ್ದಾರೆ.

ಡಾ.ರಾಜ್‌ಕುಮಾರ್ ಅವರ ಹೆಸರಲ್ಲ. ಅವರ ಕಾಲು ಧೂಳಿಗೂ ನಾವು ಸಮ ಅಲ್ಲ. ದಯವಿಟ್ಟು ಈ ವಿಚಾರವನ್ನು ಅಲ್ಲಿ ತನಕ ಎತ್ತುಕೊಂಡು ಹೋಗಲೇಬೇಡಿ. ನಾವು ಪ್ರಯತ್ನ ಮಾಡಬಹುದು. ಆದರೆ 1% ನಾವು ಅವರ ನಟನೆಗೆ ರೀಚ್ ಆಗೋಕೆ ಸಾಧ್ಯನೇ ಇಲ್ಲ ಎಂದು ಅಣ್ಣಾವ್ರ ಬಗ್ಗೆ ಹೆಮ್ಮೆಯಿಂದ ದರ್ಶನ್ ಮಾತನಾಡಿದ್ದಾರೆ. ಇದನ್ನೂ ಓದಿ:ಹೊಸ ವರ್ಷಕ್ಕೆ ವಿಶೇಷವಾಗಿ ಶುಭಕೋರಿದ ಅಭಿಷೇಕ್ ಪತ್ನಿ ಅವಿವಾ

ಬಳಿಕ ಕಾಟೇರ ಸಿನಿಮಾದಲ್ಲಿ ಜಾತಿ ಒಳಗೊಂಡಂತೆ ಸಿನಿಮಾದ ಒಳಗೆ ಮತ್ತಷ್ಟು ಭಿನ್ನ ಕಥೆ ಇದೆ. ಕಥೆ ಸೆಲೆಕ್ಷನ್ ಹೇಗೆ ಮಾಡಿದ್ರಿ ಎಂದು ದರ್ಶನ್‌ಗೆ ಪ್ರೆಸ್‌ ಮೀಟ್‌ನಲ್ಲಿ  ಕೇಳಲಾಯಿತು.

‘ಕಾಟೇರ’ ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇವತ್ತು ಜನ ಮಾತನಾಡೋದೇನು? ಗಂಡಸು ಬೆವರು ಸುರಿಸಬೇಕು. ಜೊಲ್ಲು ಸುರಿಸಬಾರದು ಅಂತಾರೆ. ಇದರಲ್ಲಿ ಅದೆಷ್ಟು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದು ದರ್ಶನ್ ಮಾತನಾಡಿದ್ದಾರೆ.

ಕಥೆ ಕೇಳುವಾಗ ನಟನೆಗೆ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ದರ್ಶನ್ ಮಾತನಾಡಿದ್ದಾರೆ.

ಬಳಿಕ ನಾನು ಯಾವತ್ತಿಗೂ ರಾಷ್ಟ್ರ ಪ್ರಶಸ್ತಿ ಬರೋಕೆ ಅಂತ ಸಿನಿಮಾ ಮಾಡಲ್ಲ. ಹಾಗಿದ್ರೆ ಆರ್ಟ್ ಮೂವಿನೇ ಮಾಡುತ್ತಿದ್ದೆ ಎಂದು ಡಿಬಾಸ್ ‘ಕಾಟೇರ’ ಸಕ್ಸಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

Share This Article