ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಯಾರು?

Public TV
1 Min Read

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದಾರೆ. ಗೆಳತಿ ಪವಿತ್ರಾ ಗೌಡಗೆ (Darshan Gowda) ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನಲೆ ಈ ಕೊಲೆ ನಡೆದಿದೆ. ಅಷ್ಟಕ್ಕೂ ಯಾರು ಈ ಪವಿತ್ರಾ ಗೌಡ? ಇವರ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.

‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾ ಸೇರಿದಂತೆ ಎರಡ್ಮೂರು ಸಿನಿಮಾಗಳಲ್ಲಿ ಪವಿತ್ರಾ ನಟಿಸಿದ್ದಾರೆ. ಆದರೆ ಅವರಿಗೆ ಬಣ್ಣದ ಲೋಕ ಕೈ ಹಿಡಿಯಲಿಲ್ಲ. 10 ವರ್ಷಗಳ ಹಿಂದೆ ಸಿನಿಮಾ ಸಮಾರಂಭದಲ್ಲಿ ಶುರುವಾದ ದರ್ಶನ್ ಜೊತೆಗಿನ ಗೆಳೆತನ ಇಂದಿಗೂ ಮುಂದುವರೆಯುತ್ತಿದೆ. ಸದ್ಯ ಪವಿತ್ರಾ. ಬೆಂಗಳೂರಿನಲ್ಲಿ ತಮ್ಮದೇ ಸ್ವಂತ ಬೋಟಿಕ್ ನಡೆಸುತ್ತಿದ್ದಾರೆ. ಸಿನಿಮಾ ಕೈ ಹಿಡಿಯದ ಕಾರಣ, ಉದ್ಯಮ ಕ್ಷೇತ್ರದಲ್ಲಿ ಪವಿತ್ರಾ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಗನ ಕಳೆದುಕೊಂಡ ಪೋಷಕರ ಆಕ್ರಂದನ- ದರ್ಶನ್‌ಗೆ ಹಿಡಿ ಶಾಪ

ಕಳೆದ 10 ವರ್ಷಗಳಿಂದ ದರ್ಶನ್ ಮತ್ತು ಪವಿತ್ರಾ ಗೌಡ ಆಪ್ತರು. ಕೆಲ ತಿಂಗಳುಗಳ ಹಿಂದೆ ದರ್ಶನ್ ಜೊತೆ ಇರುವ ಕ್ಲೋಸ್ ಫೋಟೋಗಳನ್ನು ಪವಿತ್ರಾ ಗೌಡ ಶೇರ್ ಮಾಡಿ ನಮ್ಮ ಸಂಬಂಧಕ್ಕೆ 10 ವರ್ಷಗಳು ಕಳೆದಿದೆ ಎಂದು ಬರೆಕೊಂಡಿದ್ದರು. ಇವರ ಪೋಸ್ಟ್ ಬೆನ್ನಲ್ಲೇ ದರ್ಶನ್ ಪತ್ನಿ, ವಿಜಯಲಕ್ಷ್ಮಿ (Wife Vijayalakshmi) ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಅಂದಹಾಗೆ, ಚಿತ್ರದುರ್ಗದ ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಮಾಡಿದ ನಂತರ ರೇಣುಕಾಸ್ವಾಮಿರನ್ನು ಜೂನ್ 9ರಂದು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಇಬ್ಬರು ಅರೋಪಿಗಳ ಜೊತೆ ದರ್ಶನ್ ನಿರಂತರ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಕೊಲೆ ಆರೋಪಿಗಳು ದರ್ಶನ್ ಸೂಚನೆಯಂತೆ ಕೊಲೆ ಮಾಡಿದ್ದೇವೆ. ಕೊಲೆಗೆ ದರ್ಶನ್ ಸುಪಾರಿ ನೀಡಿದ್ದರು ಎಂದು ಆರೋಪಿಗಳು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ದರ್ಶನ್‌ರನ್ನು ಬಂಧಿಸಲಾಗಿದೆ. ಜೊತೆಗೆ ಪವಿತ್ರಾ ಗೌಡ ಕೂಡ ಅರೆಸ್ಟ್ ಆಗಿದ್ದಾರೆ.

Share This Article