ಕೊನೆಗೂ ನಟ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್ (Devil Cinema Shooting) ಮುಗಿಸಿಕೊಟ್ಟಿದ್ದಾರೆ. ಅತ್ತ ದರ್ಶನ್ ಥಾಯ್ಲೆಂಡ್‌ನಲ್ಲಿ ಬೀಡುಬಿಟ್ಟಿದ್ದರೆ, ಇತ್ತ ಅಭಿಮಾನಿಗಳು (Darshan Fans) ಮೋಷನ್ ಪೋಸ್ಟರ್ ರಿಲೀಸ್ ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ.
ಈಗಾಗ್ಲೇ ಘೋಷಣೆಯಾದಂತೆ ಡೆವಿಲ್ ಸಿನಿಮಾದ ಮೋಷನ್ ಪೋಸ್ಟರ್ (Devil Cinema Motion Poster) ಇದೇ ಶನಿವಾರ ರಾತ್ರಿ 8 ಗಂಟೆಗೆ ರಿಲೀಸ್ ಆಗಲಿದೆ. ಇದೇ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಡೇಟ್ ಕೂಡ ಘೋಷಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ
ಒಂದ್ಕಡೆ ಥಾಯ್ಲೆಂಡ್‌ನಲ್ಲಿ ಶೂಟಿಂಗ್ ಮಾಡ್ತಿರುವ ದರ್ಶನ್ ಪಾರ್ಟಿ ಮೂಡ್‌ನಲ್ಲೂ ಇದ್ದಾರೆ. ಇನ್ನೊಂದ್ಕಡೆ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ಆದೇಶ ಮಂಗಳವಾರ ಹೊರಬೀಳಲಿದ್ದು ಏನಾಗುತ್ತೋ ಅನ್ನೋ ಆತಂಕ ಅಭಿಮಾನಿಗಳಲ್ಲಿದೆ. ಈ ನಡುವೆಯೂ ದರ್ಶನ್ ಅಭಿಮಾನಿಗಳು ಬೆಂಗಳೂರಿನ ಅತ್ತಿಬೆಲೆಯಲ್ಲಿ ಒಂದೆಡೆ ಸೇರಿ ಡೆವಿಲ್ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಸಂಭ್ರಮಾಚರಣೆ ಮಾಡಲು ಸಜ್ಜಾಗಿದ್ದಾರೆ ದಚ್ಚು ಫ್ಯಾನ್ಸ್.
ಹಲವು ಏಳುಬೀಳುಗಳ ನಡುವೆ `ಡೆವಿಲ್’ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೂ ಕೆಲವೇ ತಿಂಗಳಲ್ಲಿ ಬಿಡುಗಡೆಗೂ ಸಜ್ಜಾಗಿದೆ. ಎಲ್ಲಾ ಕಷ್ಟಗಳು ಮುಗಿದಿದೆ ಎಂದು ದರ್ಶನ್ ಫ್ಯಾನ್ಸ್ ಖುಷಿ ಪಡುವಷ್ಟರಲ್ಲೇ ದರ್ಶನ್‌ಗೆ ಸುಪ್ರೀಂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ದರ್ಶನ್ ಅಭಿಮಾನಿಗಳ ದೃಷ್ಟಿ ಇದೇ ಮಂಗಳವಾರ ಹೊರಬೀಳುವ ಸುಪ್ರೀಂ ಕೋರ್ಟ್‌ನ ಆದೇಶದ ಮೇಲಿದ್ದರೂ ಅದಕ್ಕೂ ಮುನ್ನ ತಮ್ಮ ನೆಚ್ಚಿನ ನಟನ ಚಿತ್ರದ ಪೋಸ್ಟರ್ ರಿಲೀಸ್ ಸಂಭ್ರಮಾಚರಣೆ ಮಾಡ್ತಿರೋದು ವಿಶೇಷ. ಇದನ್ನೂ ಓದಿ: ರಾಮ-ಲಕ್ಷ್ಮಣರ ಜೊತೆ `ರಾಮಾಯಣ’ ಸೃಷ್ಟಿಕರ್ತ!