ಬೆಂಗಳೂರು: ನಾಡಿನಾದ್ಯಂತ ಗುರುವಾರ ಆಯುಧಗಳ ಪೂಜೆಯ ಹಬ್ಬ ಅದ್ಧೂರಿಯಾಗಿ ನಡೆದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳೆಂದರೆ ಅಚ್ಚುಮೆಚ್ಚು. ಹಬ್ಬದ ಪ್ರಯುಕ್ತ ದರ್ಶನ್ ಅವರ ಮನೆಯ ಮುಂದೆ ಸಾಲು ಸಾಲಾಗಿ ಕಾರುಗಳು ನಿಂತಿದ್ದು, ಆಕರ್ಷಕವಾಗಿ ಕಂಡು ಬಂದಿದೆ.
ಆಯುಧ ಪೂಜೆ ದಿನ ಜನರು ತಮ್ಮ ತಮ್ಮ ಬಳಿಯಿರುವ ವಾಹನಗಳನ್ನು ಸ್ವಚ್ಛ ಮಾಡಿ ಪೂಜೆ ಮಾಡಿ ಒಂದು ರೌಂಡ್ ಹೋಗಿ ಬರುತ್ತಾರೆ. ದರ್ಶನ್ ಬಳಿ ಈಗಾಗಲೇ ಜಾಗ್ವಾರ್, ಆಡಿ ಕ್ಯೂ 7, ಬಿಎಂಡಬ್ಲ್ಯು, ರೆಂಜ್ ರೋವರ್ ಮತ್ತು ಫೋರ್ಡ್ ಮಸ್ಟಂಗ್ ಕಾರುಗಳ ಕಲೆಕ್ಷನ್ ಇದೆ. ಇವುಗಳ ಜೊತೆ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರ್ ಕೂಡ ಇದೆ.
ಆಯುಧ ಪೂಜೆ ಪ್ರಯುಕ್ತ ದರ್ಶನ್ ಬಳಿಯಿದ್ದ ಎಲ್ಲ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಸಿಂಗಾರ ಮಾಡಿ ಪೂಜೆ ಮಾಡಲಾಗಿದೆ. ಅಭಿಮಾನಿಗಳು ಅವರ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳ ಫೋಟೋ ತೆಗೆದುಕೊಂಡು ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಮನೆ ಮುಂದೆ ನಿಂತಿರುವ ಕಾರುಗಳ ಫೋಟೊಗಳು ವೈರಲ್ ಆಗಿದೆ. ಸಾಲಾಗಿ ಅನೇಕ ರೀತಿಯ ಕಾರು ಎಲ್ಲರ ಗಮನವನ್ನು ಸೆಳೆದಿದೆ. ಒಂದೇ ಜಾಗದಲ್ಲಿ ಅನೇಕ ರೀತಿಯ ಕಾರನ್ನ ನೋಡಿ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನಿವಾಸದಲ್ಲಿ ಆಯುಧ ಪೂಜೆಯ ಪ್ರಯುಕ್ತ ವಾಹನಗಳಿಗೆ ಪೂಜೆ ಸಲ್ಲಿಸಲಾಯಿತ್ತು ..????@dasadarshan @dinakar219 @vijayaananth2 pic.twitter.com/hqf36skUXT
— D Company(R)Official (@Dcompany171) October 18, 2018