ದರ್ಶನ್ ಅಂತೋರು ಯಾರೇ ಬಂದ್ರು, ಇನ್ನೂ 100 ವರ್ಷ ಆದ್ರು 4 ಹೆಸರು ಅಳಿಸೋದಕ್ಕೆ ಸಾಧ್ಯವಿಲ್ಲ: ದರ್ಶನ್

Public TV
1 Min Read

ಮಂಡ್ಯ: ದರ್ಶನ್ ಅಲ್ಲ ದರ್ಶನ್ ಅಂತವರು ಯಾರೇ ಬಂದರೂ ಇನ್ನೂ ನೂರು ವರ್ಷವಾದರೂ ನಾಲ್ಕು ಹೆಸರನ್ನು ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವಾಗ  ದರ್ಶನ್ ಹೇಳಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ನಟ ದರ್ಶನ್, ಇನ್ನೂ ನೂರು ವರ್ಷವಾದರೂ ನಾಲ್ಕು ಹೆಸರನ್ನು ಅಳಿಸುವುದಕ್ಕೆ ಸಾಧ್ಯವಿಲ್ಲ. ನಟ ಶಂಕರ್ ನಾಗ್, ಅಂಬರೀಶ್, ರಾಜ್ ಕುಮಾರ್ ಮತ್ತು ವಿಷ್ಣು ವರ್ಧನ್ ಈ ಹೆಸರು ಅಳಿಸುವುದಕ್ಕೆ ಸಾಧ್ಯವಿಲ್ಲ. ಜನರು ಏನಾದರೂ ಕೊಟ್ಟು, ಏನ್ ಬೇಕಾದರೂ ಪಡೆಯಬಹುದು. ಆದರೆ ನಿಮ್ಮ ಮನಸ್ಸಿನಲ್ಲಿರುವ ಅಭಿಮಾನವನ್ನು ಅಳಿಸಲು ಸಾಧ್ಯವಿಲ್ಲ. ಅಪ್ಪಾಜಿಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಈಗ ಅಮ್ಮನಿಗೂ ಅವಕಾಶ ಕೊಡಿ ಎಂದು ಹೇಳಿದ್ದಾರೆ.

ಸುಮಲತಾ ಅಂಬರೀಶ್ ಕ್ರಮ ಸಂಖ್ಯೆ 20. ಅವರಿಗೆ ವೋಟ್ ಹಾಕಿ. ನಿಮ್ಮ ಪ್ರೀತಿ ಸದಾ ಅವರ ಮೇಲೆ ಇರಲಿ. ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಂಡಿ. ಕ್ರಮ ಸಂಖ್ಯೆ 20 ನಾನು ಇನ್ನೊಂದು ಸಲ ಹೇಳುತ್ತೇನೆ. ನಂಬರ್ ಗಳಲ್ಲಿ ಗೊಂದಲ ಇದೆ. ಹೀಗಾಗಿ ಯುವಕರು ವಯಸ್ಸಾದವರನ್ನು ಕರೆದುಕೊಂಡು ಹೋಗಿ ಮತ ಹಾಕಿಸಬೇಕು. ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ ದಯವಿಟ್ಟು ಅಮ್ಮನಿಗೆ ಮತ ನೀಡಿ ಎಂದು ದರ್ಶನ್ ಕೈ ಮುಗಿದು ಮನವಿ ಮಾಡಿಕೊಂಡಿದರು.

ಸುಮಲತಾ ಪರ ಕೆ.ಆರ್.ಪೇಟೆ, ಸಂತೆಬಾಚಹಳ್ಳಿ, ಅಘಲಯ, ಶೀಳನೆರೆ, ಕಿಕ್ಕೇರಿ, ಆನೆಗೋಳ ಮತ್ತು ಅಕ್ಕಿಹೆಬ್ಬಾಳಿನಲ್ಲಿ ರೋಡ್ ಶೋ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ದರ್ಶನ್ ಆಗಮಿಸಿದ ನಂತರ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ಸೀಳನೆರೆಯಲ್ಲಿ ಬೃಹತ್ ಆಪಲ್ ಹಾರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *