ಜೀವನದಲ್ಲಿ ಈ ಎರಡು ಕೆಲ್ಸ ಮಾಡ್ಬೇಡಿ ಅಂತ ಅಭಿಮಾನಿಗಳಿಗೆ ಕರೆ ಕೊಟ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್!

Public TV
1 Min Read

ಬಾಗಲಕೋಟೆ: ಜೀವನದಲ್ಲಿ ಎರಡು ಕೆಲಸ ಮಾಡಬೇಡಿ. ಒಂದು ತಲೆ ಹಿಡಿಯೋದು, ಮತ್ತೊಂದು ತಲೆ ಹೊಡಿಯೋದು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಗುರುವಾರ ನಗರದ ಎಸ್.ಆರ್.ಎನ್.ಇ. ಪೌಂಡೇಶನ್ ಅಡಿ ಅದ್ಧೂರಿ ಯುವ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿ ಯಾರು ಯಾರಿಗೂ ಆಗಲ್ಲ. ಒಂದು ಗುರಿ ಇಟ್ಟುಕೊಳ್ಳಿ. ಎರಡು ದೋಣಿಯಲ್ಲಿ ಕಾಲಿಡಬೇಡಿ. ನಮ್ಮ ತೆಪ್ಪ ನಮ್ಮ ಕೋಲು ನಮ್ಮ ಕೈಯಲ್ಲಿ ಇರಬೇಕು. ಆಗ ಮಾತ್ರ ದಡ ಮುಟ್ಟೋಕೆ ಸಾಧ್ಯ ಎಂದು ಹೇಳಿದ್ರು.

ದರ್ಶನ್ ಅವರನ್ನೇ ಆಹ್ವಾನಿಸೋಕೆ ಕಾರಣ ಅವರೊಬ್ಬ ಖ್ಯಾತ ನಟನ ಪುತ್ರ, ಕಷ್ಟಪಟ್ಟು ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ. ತಮ್ಮ ರಾಜಕೀಯ ಮುಂದಿನ ನಡೆಯನ್ನ ಈ ವೇದಿಕೆ ಮೂಲಕ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷ ಸೇರಿಕೊಳ್ಳುವ ಮುನ್ಸೂಚನೆಯನ್ನ ನೀಡಿದ್ದಾರೆ ಎಂದು ಯುವ ಉತ್ಸವ ಕಾರ್ಯಕ್ರಮವನ್ನ ಆಯೋಜಿಸಿದ್ದ ಎಸ್.ಆರ್.ಎನ್.ಇ ಪೌಂಡೇಶನ್ ನ ಅಧ್ಯಕ್ಷ ಎಸ್. ಆರ್ ನವಲಿಹಿರೇಮಠ ಹೇಳಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹೊರಹೊಮ್ಮಿದ ಹಾಡುಗಳು ಅಲ್ಲಿ ನೆರದ ಯುವ ಮನಸ್ಸುಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದವು. ವಿಜಯಪ್ರಕಾಶ್ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಚೈತ್ರಾ ಅವರ ಸೂಪರ್ ಹಿಟ್ ಹಾಡುಗಳು ಕೇಳಿಬಂದವು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಎಂಬಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೇದಿಕೆಗೆ ಬರುತ್ತಿದ್ದಂತೆ ಜನರು ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದಿದ್ದಾರೆ. ಕೈಯಲ್ಲಿ ಮೈಕ್ ಹಿಡ್ಕೊಂಡು ಜೀವನದ ಬಗ್ಗೆ ಮಾತನಾಡುತ್ತಿದ್ದಂತೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಾರ್ಯಕ್ರಮದಲ್ಲಿ ಬದ್ಮಾಶ್ ಖ್ಯಾತಿಯ ಧನಂಜಯ್ ಹಾಗೂ ನವ ನಟ ಸೂರ್ಯ ಅಲ್ಲದೇ, ನಿರೂಪಣೆಗಾಗಿ ಅನುಶ್ರೀ ಸಹ ಆಗಮಿಸಿ ಕಾರ್ಯಕ್ರಮವನ್ನು ಕಲರ್ ಫುಲ್ ಆಗಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *