ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ & ಗ್ಯಾಂಗ್ ಕೂದಲು ಸ್ಯಾಂಪಲ್ ಡಿಎನ್‌ಎ ವರದಿಗೆ ಮ್ಯಾಚ್

Public TV
1 Min Read

ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಜೈಲು ಪಾಲಾಗಿರುವ ದರ್ಶನ್ & ಗ್ಯಾಂಗ್ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ತಿದೆ. ಬಗೆದಷ್ಟು ಹತ್ತಾರು ಸಾಕ್ಷಿಗಳು ಹೊರಬರುತ್ತಿವೆ. ಇದೀಗ ಆರೋಪಿಗಳ ಕೂದಲು ಸ್ಯಾಂಪಲ್ ಡಿಎನ್‌ಎ (DNA) ಮ್ಯಾಚ್ ಆಗಿದೆ.

ದರ್ಶನ್ (Darshan) ಕೇಸ್‌ನಲ್ಲಿ ಎಫ್‌ಎಸ್‌ಎಲ್‌ನ ಬಹುತೇಕ ಎಲ್ಲಾ ರಿಪೋರ್ಟ್‌ಗಳು ಪೊಲೀಸರ ಕೈ ಸೇರಿದೆ. ಎಫ್‌ಎಸ್‌ಎಲ್ ರಿಪೋರ್ಟ್‌ಗಳಲ್ಲಿ ಬಹುಮುಖ್ಯವಾದ ಡಿಎನ್‌ಎ ರಿಪೋರ್ಟ್ ಪೊಲೀಸರ ಕೈಗೆ ಸಿಕ್ಕಿದೆ. ಈ ಮೂಲಕ ದರ್ಶನ್ ಜಸ್ಟ್ ರಕ್ತ ಮಾತ್ರ ಅಲ್ಲ ಇನ್ನುಳಿದ ಆರೋಪಿಗಳ ಕೂದಲು ಕೂಡ ಸಂಕಷ್ಟ ತಂದೊಡ್ಡುತ್ತಾ ಇದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಹೇಶ್ ಬಾಬು ಪತ್ನಿ

ರೇಣುಕಾಸ್ವಾಮಿ ಶವವನ್ನು ಬಿಸಾಡುವಾಗ ಸ್ಕಾರ್ಪಿಯೋ ಕಾರಲ್ಲಿ ನಾಲ್ವರು ಆರೋಪಿಗಳು ಹೋಗಿದ್ದರು. ಆ ಸ್ಕಾರ್ಪಿಯೋ ಕಾರಲ್ಲಿ ಆರೋಪಿಗಳ ಕೂದಲು ಉದುರಿತ್ತು. ಆ ಉದುರಿದ ಕೂದಲನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಡಿಎನ್‌ಎ ವರದಿ ಬಂದಿದ್ದು, ಆರೋಪಿಗಳ ಕೂದಲು ಮ್ಯಾಚ್ ಆಗಿದೆ.

Share This Article