ಹಲ್ಲೆಯ ತೀವ್ರತೆಗೆ ಪ್ರಜ್ಞೆ ತಪ್ಪಿದ್ದ ರೇಣುಕಾಸ್ವಾಮಿ ಕೈ, ಕಿವಿ, ಹೊಟ್ಟೆಗೆ ಕರೆಂಟ್ ಶಾಕ್

Public TV
1 Min Read

– ಈ ಹಿಂದೆಯೂ ಶೆಡ್‍ನಲ್ಲಿ ಹಲವರಿಗೆ ಟಾರ್ಚರ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಮರ್ಡರ್ ಕೇಸಲ್ಲಿ ದರ್ಶನ್ ಗ್ಯಾಂಗ್‍ನ ಮತ್ತಷ್ಟು ಕರಾಳಮುಖ ಬಯಲಾಗ್ತಿದೆ. ಆರೋಪಿಗಳ ವಿಚಾರಣೆ ವೇಳೆ ಆ ಗ್ಯಾಂಗ್‍ನ ಮತ್ತಷ್ಟು ಕ್ರೌರ್ಯ ಅನಾವರಣಗೊಳ್ತಿದೆ.

ಹೌದು. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬಂತೆ ಟಾರ್ಚರ್ ಮೇಲೆ ಟಾರ್ಚರ್ ಕೊಟ್ಟು ರೇಣುಕಾಸ್ವಾಮಿಯನ್ನು ದುರುಳರು ಕೊಂದಿದ್ದಾರೆ. ಆರಂಭದಲ್ಲಿ ರೇಣುಕಾಸ್ವಾಮಿ ಮೇಲೆ ಕಬ್ಬಿಣದ ರಾಡ್, ರಿಪೀಸ್, ಲಾಠಿಯಿಂದ ಹಲ್ಲೆ ಮಾಡಿದ್ದ ದರ್ಶನ್ ಗ್ಯಾಂಗ್, ಅವರ ತಲೆಯನ್ನು ಲಾರಿಗೆ ಜಜ್ಜಿತ್ತು. ಇದರಿಂದ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ರು.

ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಕರೆಂಟ್ ಶಾಕ್ ನೀಡಿದ್ದಾರೆ. ಸ್ವಾಮಿಯ ಕೈ-ಕಿವಿ-ಹೊಟ್ಟೆ ಭಾಗಕ್ಕೆ ಕರೆಂಟ್ ಶಾಕ್ ನೀಡಿ ಟಾರ್ಚರ್ ಕೊಟ್ಟಿದ್ದಾರೆ. ಈ ಸಂಬಂಧ 9ನೇ ಆರೋಪಿ ಧನರಾಜ್‍ನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕರೆಂಟ್ ಶಾಕ್ ಕೊಡಲು ಬಳಸುವ ಮೆಗ್ಗಾರ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಸ್ಟಡಿಯಲ್ಲಿರುವ ʼಗಜ’ನಿಗೆ ಕರಗಿದ ಗತ್ತು- ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್!

ಇನ್ನು ಪಟ್ಟಣಗೆರೆಯ ಜಯಣ್ಣ ಶೆಡ್‍ನಲ್ಲಿ ಹಿಂದೆ ಹಲವರಿಗೆ ಟಾರ್ಚರ್ ನೀಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಫೈನಾನ್ಸ್ ಸರಿಯಾಗಿ ಕಟ್ಟದವರನ್ನು ಇಲ್ಲಿ ಕೂಡಿ ಹಾಕಿ ಟಾರ್ಚರ್ ಕೊಡಲಾಗ್ತಿತ್ತು. ವಿನಯ್ ಕೃತ್ಯಗಳಿಗೆ ಮೆಗ್ಗಾರ್ ಎಕ್ಸ್‍ಪರ್ಟ್ ಧನರಾಜ್ ಸಾಥ್ ಕೊಡ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದೆಲ್ಲಾ ನಿಮಗೆ ಹೇಗೆಲ್ಲಾ ಗೊತ್ತಾಯ್ತು ಎಂದು ಮಾಧ್ಯಮಗಳನ್ನು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ.

Share This Article