ಎದೆಮೂಳೆ ಮುರಿತ, ವೃಷಣಕ್ಕೆ ಹಾನಿ; 600 ರೂ.ನ ಮೆಗ್ಗಾರ್‌ನಿಂದ ಕರೆಂಟ್ ಶಾಕ್ ಕೊಟ್ಟು ಹಿಂಸೆ

Public TV
1 Min Read

ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯಗಳು – ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Ranukaswamy Murder Case) ಮೃತದೇಹದ ಮೇಲೆ 39 ಗಾಯದ ಗುರುತುಗಳಿವೆ ಎಂದು ಕೋರ್ಟ್‌ಗೆ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರೇಣುಕಾಸ್ವಾಮಿ ಮೇಲಿನ ಭೀಕರ ಹಲ್ಲೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯ ಭೀಕರತೆ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: 3,991 ಪುಟ, 231 ಸಾಕ್ಷಿ, 5 ವ್ಯಾಲ್ಯೂಂ – ದರ್ಶನ್ & ಗ್ಯಾಂಗ್ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ಏನಿದೆ?

ರೇಣುಕಾಸ್ವಾಮಿ ಮೃತದೇಹದ ಮೇಲೆ 39 ಗಾಯದ ಗುರುತು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವೇಳೆ 39 ಕಡೆ ಗಾಯಗಳು ಪತ್ತೆಯಾಗಿವೆ. ಪ್ರಮುಖವಾಗಿ ಎದೆಮೂಳೆ ಮುರಿತ, ತಲೆಯಲ್ಲಿ ಆಳವಾದ ಗಾಯ ಪತ್ತೆಯಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಇದೆ.

ವೃಷಣಕ್ಕೆ ಹಾನಿ ಹಾಗೂ ಕರೆಂಟ್ ಶಾಕ್ ಕೊಟ್ಟು ಗ್ಯಾಂಗ್ ಕೊಲೆ ಮಾಡಿದೆ. ಆರೋಪಿಗಳು ಅತಿ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್‌ – ದರ್ಶನ್‌ & ಗ್ಯಾಂಗ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

Share This Article