50 ನಿಮಿಷ ಶೆಡ್‍ನಲ್ಲಿ ರೇಣುಕಾಸ್ವಾಮಿ ಮೇಲೆ ‘ಪೊರ್ಕಿ’ ಕ್ರೌರ್ಯ!

Public TV
1 Min Read

ಬೆಂಗಳೂರು: ಆರ್ ಆರ್ ನಗರ ಶೆಡ್‍ನಲ್ಲಿ ಮೃಗಿಯಾಗಿ ನರರಾಕ್ಷಸನ ರೀತಿಯಲ್ಲಿ ಕೊಲೆ ಆಗಿರುವ ಚಿತ್ರದುರ್ಗದ ರೇಣುಕಾಸ್ವಾಮಿಯ ಮೇಲೆ ನಟ ದರ್ಶನ್ ಅಟ್ಯಾಕ್ ಮಾಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಭಾನುವಾರ ಮುಂಜಾನೆ 4:30ರ ವೇಳೆಗೆ ಶೆಡ್‍ಗೆ ಎಂಟ್ರಿಯಾಗಿರೋ ಆರೋಪಿ ದರ್ಶನ್ (Darshan), 50 ನಿಮಿಷಗಳ ಕಾಲ ರೇಣುಕಾಸ್ವಾಮಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ. ಫಿಲ್ಮಿ ಸ್ಟೈಲ್‍ನಲ್ಲಿ ಹೊರಗಡೆ ಯಾರಿಗೂ ಕಾಣದಂತೆ ಹಾಗೂ ರೇಣುಕಾಸ್ವಾಮಿಯ ಕೂಗಾಟ ಚೀರಾಟ ಹೊರಗಡೆಯವರಿಗೆ ಕೇಳದಂತೆ ಶೆಡ್‍ನಲ್ಲಿ ಸೀಜ್ ಮಾಡಿರುವ ಕಾರುಗಳಿಂದ ಸುತ್ತಲು ಕೋಟೆ ರೀತಿಯಲ್ಲಿ ಕಟ್ಟಿಕೊಂಡಿದ್ದಾರೆ. ಅಲ್ಲದೇ ಶೆಡ್‍ನ ಒಳಗಡೆ ಕಟ್ಟಿಕೊಂಡಿದ್ದ ಕೋಟೆಯಲ್ಲಿ ನಟ ದರ್ಶನ್ ಪ್ರಕರಣದ ಎ3 ಆರೋಪಿಯಾಗಿರೋ ಪವನ್ ಕೈಗೆ ಮೊಬೈಲ್ ಕೊಟ್ಟು ಕೊಲೆಯಾಗಿರೋ ರೇಣುಕಾಸ್ವಾಮಿ ಮಾಡಿರುವ ಮೆಸೇಜ್ ಗಳನ್ನ ಓದಲು ದರ್ಶನ್ ಹೇಳಿದ್ದಾರೆ.

ಇತ್ತ ಬಾಸ್ ಮಾತಿನಂತೆ ಎ3 ಆರೋಪಿ ಪವನ್ ಜೋರು ಧ್ವನಿಯಲ್ಲಿ ರೇಣುಕಾಸ್ವಾಮಿ (Renukaswamy) ಮಾಡಿರುವ ಸಂದೇಶಗಳನ್ನ ಒಂದೊಂದಾಗಿ ಓದಿ ಹೇಳಿದ್ದಾನೆ. ಈ ವೇಳೆ ದರ್ಶನ್ ಪ್ರತಿಯೊಂದು ಸಂದೇಶಕ್ಕೂ ಒಂದೊಂದು ಪಂಚ್ ಎಂಬಂತೆ ಶೂ ಕಾಲಿನಿಂದ ಒಮ್ಮೆ ಒದ್ರೆ ಸುತ್ತ ಕೋಟೆ ಕಟ್ಟಿದ್ದ ಕಾರುಗಳಿಗೆ ಹೋಗಿ ರೇಣುಕಾಸ್ವಾಮಿ ಬಡಿದು ಮತ್ತೆ ಕೆಳಗಡೆ ಬೀಳುತ್ತಾರೆ. ಬಳಿಕ ಮತ್ತೊಂದು ಸಂದೇಶ ಓದಿದ ಕೂಡಲೇ ಮತ್ತದೇ ಪಂಚ್. ಹೀಗೆ ಸುಮಾರು 30 ನಿಮಿಷಗಳ ಕಾಲ ದರ್ಶನ್ ರೇಣುಕಾಸ್ವಾಮಿಯ ಮೇಲೆ ರಾಕ್ಷಸನ ರೀತಿಯಲ್ಲಿ ಫಿಲ್ಮಿ ಸ್ಟೈಲ್ ಫೈಟ್ ಮಾಡಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯೇಕ್ಷದರ್ಶಿ ಪೆÇಲೀಸರ ಬಳಿ ಸಾಕ್ಷಿ ಹೇಳಿದ್ದಾನೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ

Share This Article