ಮಿಲನಾ ಬೆಸ್ಟ್ ಮದರ್: ಪತ್ನಿಯನ್ನು ಹೊಗಳಿದ ಡಾರ್ಲಿಂಗ್ ಕೃಷ್ಣ

Public TV
1 Min Read

ಸ್ಯಾಂಡಲ್‌ವುಡ್ ನಟಿ ಮಿಲನಾ ನಾಗರಾಜ್ (Milana Nagaraj) ಮತ್ತು ಡಾರ್ಲಿಂಗ್ ಕೃಷ್ಣ (Darling Krishna) ದಂಪತಿ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸದ ನಡುವೆಯೂ ಮಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದೀಗ ಪುತ್ರಿ ‘ಪರಿ’ಗೆ (Pari) 6 ತಿಂಗಳು ತುಂಬಿದ್ದು, ಕ್ಯೂಟ್ ಫೋಟೋವೊಂದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಿಲನಾ ಬೆಸ್ಟ್ ಮದರ್ ಎಂದು ಪತ್ನಿಯನ್ನು ಕೃಷ್ಣ ಹೊಗಳಿದ್ದಾರೆ.

ನಮ್ಮ ಪುಟ್ಟ ತಾರೆಗೆ 6 ತಿಂಗಳ ಶುಭಾಶಯಗಳು. ನನ್ನ ಹೆಂಡತಿ ಸೂಪರ್ ಹೀರೋ ಆಗಿ ಅರ್ಧ ವರ್ಷ ಕಳೆದಿದೆ. ನನ್ನ ಅದ್ಭುತ ಹೆಂಡತಿ, ಅತ್ಯುತ್ತಮ ತಾಯಿಯಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಶೀರ್ಷಿಕೆ ಹಾಕಿದ್ದಾರೆ. ಡಾರ್ಲಿಂಗ್ ಕೃಷ್ಣ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ ಬಂದಿದೆ. ಇದನ್ನೂ ಓದಿ:ಅನುಮತಿ ಇಲ್ಲದೇ ಶೂಟಿಂಗ್- ತರುಣ್ ಸುಧೀರ್ ಸಿನಿಮಾ ಮೇಲೆ ಅರಣ್ಯಾಧಿಕಾರಿಗಳ ದಾಳಿ

 

View this post on Instagram

 

A post shared by Darling Krishna (@darling_krishnaa)

ಇನ್ನೂ 6 ವರ್ಷ ಕೃಷ್ಣ ಮತ್ತು ಮಿಲನಾ ಪ್ರೀತಿಸಿ 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡರು.

Share This Article