‘ಕೋಟಿ’ ಚಿತ್ರದ ಸಕ್ಸಸ್ ನಂತರ ಮದುವೆ ಆಗ್ತೀನಿ ಎಂದ ಡಾಲಿ

Public TV
1 Min Read

ಸ್ಯಾಂಡಲ್‌ವುಡ್ ನಟ ಡಾಲಿಗೆ (Daali) ಕನ್ನಡ ಮಾತ್ರವಲ್ಲ ಪರಭಾಷೆಯಲ್ಲೂ ಭಾರೀ ಬೇಡಿಕೆ ಇದೆ. ಸದ್ಯ ಕನ್ನಡದ ‘ಕೋಟಿ’ ಸಿನಿಮಾದ ಪ್ರಚಾರ ಕಾರ್ಯದ ವೇಳೆ, ಮದುವೆ ಬಗ್ಗೆ ಎದುರಾದ ಪ್ರಶ್ನೆ ಧನಂಜಯ ರಿಯಾಕ್ಟ್ ಮಾಡಿದ್ದಾರೆ. ‘ಕೋಟಿ’ (Kotee) ಚಿತ್ರ ಸಕ್ಸಸ್ ಆದ್ಮೇಲೆ ಮದುವೆ (Wedding) ಆಗ್ತೀನಿ ಎಂದು ಡಾಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

ಎಲ್ಲೇ ಹೋದರೂ ಎದುರಾಗುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ ಎಂದು ಹಾಗಾಗಿ ಈ ಬಗ್ಗೆ ಧನಂಜಯ ಪ್ರತಿಕ್ರಿಯೆ ನೀಡಿದ್ದಾರೆ. ವರ್ಷಗಳು ಹೋಗುತ್ತಾ ಇರುತ್ತದೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗುವುದು ಗೊತ್ತಾಗಲ್ಲ, ಸತ್ತು ಹೋಗುವುದು ಗೊತ್ತಾಗಲ್ಲ. ಒಂದು ಸಿನಿಮಾ ಮಾಡೋದರ ಒಳಗೆ ಎರಡು ವರ್ಷ ಕಳೆದು ಹೋಗಿರುತ್ತದೆ. ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಮದುವೆ ಯಾವಾಗ ಅಂತ ಕೇಳುವ ಹಾಗೆ ಆಗಿದೆ ಎಂದು ಡಾಲಿ ತಮಾಷೆಯಾಗಿ ಉತ್ತರಿಸಿದ್ದಾರೆ.

ಪ್ರಮಾಣ ಮಾಡಿದ್ದೀನಿ. ‘ಕೋಟಿ’ ಸಿನಿಮಾ ಚೆನ್ನಾಗಿ ಆದರೆ ಪಕ್ಕಾ ಮದುವೆ. ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿ ಬಿಡುತ್ತಾರೆ. ‘ಕೋಟಿ’ ಸಿನಿಮಾ ಹಿಟ್ ಆಗುತ್ತದೆ. ಯಾಕೆಂದರೆ ಈ ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಡಾಲಿ ಮಾತನಾಡಿದ್ದಾರೆ.

ಅಂದಹಾಗೆ, ‘ಕೋಟಿ’ (Kotee Film) ಸಿನಿಮಾ ಇದೇ ಜೂನ್ 14ಕ್ಕೆ ರಿಲೀಸ್ ಆಗುತ್ತಿದೆ. ಧನಂಜಯಗೆ ನಾಯಕಿಯಾಗಿ ಮೋಕ್ಷಾ ಕುಶಾಲ್ (Moksha Kushal) ನಟಿಸಿದ್ದಾರೆ. ಈ ಚಿತ್ರವನ್ನು ಪರಮ್ ನಿರ್ದೇಶನ ಮಾಡಿದ್ದಾರೆ.

Share This Article