‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ಶೂಟಿಂಗ್‌ನಲ್ಲಿ ಡಾಲಿ ಭಾಗಿ

Public TV
1 Min Read

ನ್ನಡದ ಸ್ಟಾರ್ ನಟ ಡಾಲಿ ಧನಂಜಯ್ (Actor Dhananjay) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಉತ್ತರಕಾಂಡ’ ಚಿತ್ರದ ಶೂಟಿಂಗ್ ಬಳಿಕ ‘ಅಣ್ಣ ಫ್ರಂ ಮೆಕ್ಸಿಕೋ’ (Anna From Mexico) ಚಿತ್ರೀಕರಣದಲ್ಲಿ ಡಾಲಿ ಭಾಗಿಯಾಗಿದ್ದಾರೆ. ಶೂಟಿಂಗ್ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಇದೀಗ ‘ಅಣ್ಣ ಫ್ರಂ ಮೆಕ್ಸಿಕೋ’ ಆ್ಯಕ್ಷನ್ ಭಾಗದ ಚಿತ್ರೀಕರಣ ನಡೆಯಲಿದ್ದು, ಮೇ 13ರಿಂದ ಟಾಕಿ ಭಾಗಗಳು ಆರಂಭ ಆಗಲಿದೆ. ಅಣ್ಣ ಫ್ರಂ ಮೆಕ್ಸಿಕೋ ಸೆಟ್‌ನಲ್ಲಿ ಡಾಲಿ ಬಿಳಿ ಅಂಗಿ ಮತ್ತು ಪಂಚೆಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಡಾಲಿ ಜೊತೆ ನಾಗಭೂಷಣ್, ರಂಗಾಯಣ ರಘು, ಹಿರಿಯ ನಟಿ ಉಮಾಶ್ರೀ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

 

View this post on Instagram

 

A post shared by Daali Dhananjaya (@dhananjaya_ka)

‘ಬಡವ ರಾಸ್ಕಲ್’ ಚಿತ್ರದ ಡೈರೆಕ್ಟರ್ ಶಂಕರ್ ಗುರು (Director Shankar Guru) ಇದೀಗ ಮತ್ತೊಮ್ಮೆ ಡಾಲಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೆ ‘ಬಡವ ರಾಸ್ಕಲ್’ ಕಾಂಬಿನೇಷನ್ ಈ ಚಿತ್ರದ ಮೂಲಕ ಒಂದಾಗುತ್ತಿದೆ. ಸೂಪರ್ ಹಿಟ್ ಕೊಟ್ಟ ಜೋಡಿ ಮತ್ತೆ ಹೊಸ ಕಥೆ ಹೇಳಲು ಹೊರಟಿರುವುದು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಜೀಬ್ರಾ, ‘ಪುಷ್ಪ 2’ (Pushpa 2) ಸೇರಿದಂತೆ ಹಲವು ಸಿನಿಮಾಗಳು ಧನಂಜಯ್ ಕೈಯಲ್ಲಿವೆ. ವಿದ್ಯಾಪತಿ, ಜೆಸಿ-ದಿ ಯೂನಿವರ್ಸಿಟಿ ಎಂಬ ಚಿತ್ರಗಳನ್ನು ಡಾಲಿ ನಿರ್ಮಾಣ ಮಾಡುತ್ತಿದ್ದಾರೆ.

Share This Article