ಡಾಲಿ ಧನಂಜಯ್ ಕಲ್ಯಾಣ ವೈಭೋಗ

Public TV
1 Min Read

– ಡಾಕ್ಟರ್ ಜೊತೆ ಹಸೆಮಣೆ ಏರಲು ರೆಡಿಯಾದ ನಟ

ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಧನಂಜಯ್ (Daali Dhananjay) ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್ ಧನ್ಯತಾ ಜೊತೆ ಸಪ್ತಪದಿ ತುಳಿಯಲು ನಟ ಡಾಲಿ ಸಜ್ಜಾಗಿದ್ದಾರೆ.

ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಸಮಾರಂಭದಲ್ಲಿ ಧನ್ಯತಾ ಜೊತೆ ಧನಂಜಯ್ ಹಸೆಮಣೆ ಏರಲಿದ್ದಾರೆ. ಅರಸೀಕೆರೆಯ ಕಾಳೇನಹಳ್ಳಿ ಹುಡುಗ ಚಿತ್ರದುರ್ಗದ ಶಿವಪುರದ ಹುಡುಗಿಯ ಜೊತೆ ಕಲ್ಯಾಣವಾಗುತ್ತಿದ್ದಾರೆ.

ಭಾನುವಾರ ಬೆಳಗ್ಗೆಯಿಂದಲೇ ಧಾರಾ ಮುಹೂರ್ತದ ದಿನದ ಶಾಸ್ತ್ರಗಳು ನಡೆಯುತ್ತಿವೆ. ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಸಂಬಂಧ ಮಾಲೆ ಅರ್ಪಣೆ ಶಾಸ್ತ್ರ ನೆರವೇರಿದೆ.

ವಧು-ವರರಿಗೆ ಧಾರಾ ಮುಹೂರ್ತ ನಡೆಯಲಿದೆ. ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ 8:20 ರಿಂದ 10:00 ರ ವರೆಗೂ ನಡೆಯಲಿದೆ. ಮಾಂಗಲ್ಯ ಧಾರಣೆ ನಂತರ ಸಪ್ತಪದಿ ತುಳಿಯುವುದು, ಅರುಂಧತಿ ನಕ್ಷತ್ರ ದರ್ಶನ ನಡೆಯಲಿದೆ.

ಬಾಸಿಂಗ ವಿಸರ್ಜನೆ ಶಾಸ್ತ್ರ ನೆರವೇರಲಿದೆ. ಇಂದು ಕೂಡಾ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಗಣ್ಯರು, ಆಪ್ತರು ಆಗಮಿಸಲಿದ್ದಾರೆ. ನಟ ಯಶ್, ಶಿವಕುಮಾರ್, ಸುದೀಪ್ ಬರುವ ಸಾಧ್ಯತೆಯಿದೆ.

Share This Article