ನಟ ಚಿರಂಜೀವಿ ಸರ್ಜಾ 3 ನೇ ವರ್ಷದ ಪುಣ್ಯತಿಥಿ

Public TV
1 Min Read

ಸ್ಯಾಂಡಲ್ ವುಡ್ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರ ಮೂರನೇ ವರ್ಷದ ಪುಣ್ಯತಿಥಿ (Punyatithi) ಇಂದು ಕಾರ್ಯಕ್ರಮ ನಡೆಯಿತು. ಬೆಂಗಳೂರು ಹೊರವಲಯದ ನೆಲಗುಳಿ ಬಳಿಯ ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಕುಟುಂಬಸ್ಥರು ಅಗಲಿದ ಚಿರುವನ್ನು ನೆನಪಿಸಿಕೊಂಡರು.

  

ಚಿರು ಪತ್ನಿ ಮೇಘನಾ ರಾಜ್ (Meghana Raj), ಮೇಘನಾ ತಂದೆ-ತಾಯಿ, ಚಿರು ಪುತ್ರ ರಾಯನ್ (Rayan), ಚಿರು ಸಹೋದರ ಧ್ರುವ ಸರ್ಜಾ (Dhruva Sarja), ಹಾಗೂ ಚಿರು ತಂದೆ-ತಾಯಿ ಇಂದು ನಡೆದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದರು. ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ ಕುಟುಂಬಸ್ಥರು, ಕೆಲ ಕ್ಷಣ ಭಾವುಕರಾದರು. ಈ ಸಂದರ್ಭದಲ್ಲಿ ನಟ ದುನಿಯಾ ವಿಜಯ್ ಕೂಡ ಆಗಮಿಸಿ ಅಗಲಿದ ಮಿತ್ರನ ಸಮಾಧಿಗೆ  ಪೂಜೆ ಸಲ್ಲಿಸಿದರು. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

 

ಚಿರು ಸಮಾಧಿಗೆ ಗುಡಿ ಕಟ್ಟಿಸಲಾಗಿದ್ದು ಸುತ್ತಲೂ ಕಾರಂಜಿಯ ಸಿಂಗಾರ ಮಾಡಲಾಗಿದೆ. ಅಭಿಮಾನಿಗಳು ಬಂದು ಹೋಗುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಆಗಮಿಸಿ, ಪೂಜೆ ಸಲ್ಲಿಸಿದರು.

Share This Article