24 ಸಾವಿರ ಡ್ಯಾನ್ಸ್‌ ಸ್ಟೆಪ್ಸ್‌ ಮಾಡಿದ ಹೆಗ್ಗಳಿಕೆ- ಮೆಗಾಸ್ಟಾರ್ ಚಿರಂಜೀವಿ ಗಿನ್ನಿಸ್ ದಾಖಲೆ

Public TV
1 Min Read

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸೆ.22ರಂದು ಅವರಿಗೆ ಭಾರತೀಯ ಚಿತ್ರರಂಗದ ‘ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ. ಡ್ಯಾನ್ಸ್‌ ವಿಚಾರದಲ್ಲಿ‌ ಗಿನ್ನಿಸ್ ದಾಖಲೆ ಬರೆದ ಚಿರಂಜೀವಿಗೆ ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

69 ವರ್ಷ ವಯಸ್ಸಿನ ಚಿರಂಜೀವಿಯವರು ತನ್ನ 46 ವರ್ಷಗಳ ಅವಧಿಯಲ್ಲಿ 156 ಸಿನಿಮಾಗಳಲ್ಲಿ 537 ಹಾಡುಗಳಲ್ಲಿ 24000 ಡ್ಯಾನ್ಸ್‌ ಸ್ಟೆಪ್ಸ್‌ ಹಾಕಿದ್ದಾರೆ. ಈ ವಿಚಾರವಾಗಿ ವಿಶೇಷ ಗೌರವವನ್ನು ಪಡೆದಿದ್ದಾರೆ.

ಇನ್ನೂ ನಾನು ಇಲ್ಲಿಗೆ ಬಂದಿರೋದು ಸಂತೋಷವಾಗಿದೆ. ಚಿರಂಜೀವಿಯವರ ಅಭಿಮಾನಿಗಳನ್ನು ನೋಡಲು ಸಂತೋಷವಾಗುತ್ತಿದೆ, ಎಲ್ಲರಿಗೂ ಧನ್ಯವಾದಗಳು. ನಾನು ಕೂಡ ಅವರ ದೊಡ್ಡ ಅಭಿಮಾನಿ ಎಂದು ಆಮೀರ್ ಹೇಳಿದ್ದಾರೆ.

ಈ ಕಾರ್ಯಕ್ರಮಕ್ಕೆ ಅಶ್ವಿನಿ ದತ್ತ, ಬಿ. ಗೋಪಾಲ್, ಅಲ್ಲು ಅರವಿಂದ್, ಸುರೇಶ್ ಬಾಬು, ರಾಘವೇಂದ್ರ ರಾವ್, ಬಾಬಿ, ಗುಣಶೇಖರ್, ವಸಿಷ್ಠ, ಸುಷ್ಮಿತಾ, ವರುಣ್ ತೇಜ್, ವೈಷ್ಣವ್ ತೇಜ್ ಮುಂತಾದವರು ಆಗಮಿಸಿದ್ದರು.

Share This Article