ನಟ ಚೇತನ್ ಬಂಧನ ಅಕ್ರಮ: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

By
1 Min Read

ಕಳೆದ ಮೂರು ದಿನಗಳಿಂದ ನಟ ಚೇತನ್ ಬಂಧನದ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಸುದೀರ್ಘ ಪತ್ರ ಬರೆದಿರುವ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ, ಪೊಲೀಸ್ ನಡೆಯ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎರಡು ಪುಟಗಳ ಪತ್ರ ಬರೆದು, “ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸುವಾಗ ಕೆಲ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರಿಂಕೋರ್ಟ್ ಹೇಳಿದೆ. ಈ ಕ್ರಮಗಳನ್ನು ಮೀರಿ ಚೇತನ್ ಅಹಿಂಸಾರನ್ನು ಶೇಷಾದ್ರಿಪುರಂ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಈ ಬಗ್ಗೆ ಒಂದು ಸೊಮೋಟೊ ಕಂಟ್ಮೆಂಪ್ಟ್ ಆಫ್ ಕೋರ್ಟ್ ಕೇಸನ್ನು ಶೇಷಾದ್ರಿಪುರಂ ಪೊಲೀಸರ ಮೇಲೆ ಯಾಕೆ ದಾಖಲಿಸಬಾರದು?” ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

ಅಲ್ಲದೇ, “ದುರ್ಬಲರು, ಧ್ವನಿ ರಹಿತರ ಪರವಾಗಿ ಧ್ವನಿಯಾಗಲು ಅಥವಾ ಸಾರ್ವಜನಿಕ ವ್ಯವಸ್ಥೆ ಕುಸಿದಾಗ ಪೊಲೀಸರೇ ಸೊಮೊಟೋ ಕೇಸ್ ದಾಖಲಿಸುತ್ತಾರೆ. ಪೊಲೀಸರಿಗೆ ಎಫ್ಐಆರ್ ದಾಖಲಿಸಲು ಕರ್ನಾಟಕದಲ್ಲಿ ಅಪರಾಧಿಗಳ ಕೊರತೆಯಿದ್ದು, ಅದಕ್ಕಾಗಿ ಏನಾದರೂ ನೆಟ್ಟಿಗರ ಮೇಲೆ ಎಫ್‍ಐಆರ್ ದಾಖಲಿಸುತ್ತೀರಿ ಎಂದಾದರೆ, ಪೊಲೀಸ್ ಇಲಾಖೆಯಲ್ಲೇ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರಗಳ ಮಾಹಿತಿಯನ್ನು ನಾನು ನೀಡುತ್ತೇನೆ. ಅವುಗಳ ಮೇಲೆ ನೀವು ಸೋ ಮೋಟೋ ಎಫ್‍ಐಆರ್ ದಾಖಲಿಸಿ” ಎಂದು ಪೊಲೀಸ್ ಇಲಾಖೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

ನಟ ಚೇತನ್ ಬಂಧನದ ಕುರಿತು ಅನುಪಮಾ ಶೆಣೈ ಸರಣಿಯಾಗಿವಾಗಿ ಟ್ವಿಟ್ ಮಾಡಿದ್ದು, ಪೊಲೀಸರ ನಡೆ ಅನುಮಾನಾಸ್ಪದವಾಗಿದೆ. ಹಾಗಾಗಿ ಇದು ಸರಿಯಾದ ನಡೆಯಲ್ಲ ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *