ಹೆಣ್ಮಕ್ಕಳ ಬಟ್ಟೆಯ ಬಗ್ಗೆ ಸಲ್ಮಾನ್‌ ಮಾತು ವ್ಯಂಗ್ಯವಾಗಿ ಕಾಣುತ್ತಿದೆ- ಚೇತನ್‌ ಸಿಡಿಮಿಡಿ

Public TV
2 Min Read

‘ಆ ದಿನಗಳು’ (Aa Dinagalu Film) ಚಿತ್ರ ಖ್ಯಾತಿ ನಟ ಚೇತನ್ (Actor Chethan) ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ (Salman Khan) ವಿರುದ್ಧ ಕಿಡಿಕಾರಿದ್ದಾರೆ. ಮಹಿಳೆಯರ ಬಟ್ಟೆ ಕುರಿತು ಸಲ್ಮಾನ್ ಖಾನ್ ನೀಡಿದ್ದ ಹೇಳಿಕೆಗೆ ಚೇತನ್ ರಾಂಗ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರದ ಸೋಲಿನ ನಂತರ ಸಲ್ಮಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ತಾವು ಮಗುವನ್ನು ಹೊಂದುವ ಬಗ್ಗೆ, ಎಕ್ಸ್‌ಗಳ ವಿಚಾರಗಳನ್ನ ಸಲ್ಮಾನ್ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ಹೆಣ್ಣು ಮಕ್ಕಳ ಬಟ್ಟೆ ಬಗ್ಗೆ ಸಲ್ಮಾನ್ ಖಾನ್ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ:ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

ಸಂದರ್ಶನದಲ್ಲಿ ಸಲ್ಮಾನ್ ಖಾನ್, ಮಹಿಳೆಯ (Women) ದೇಹ ಪವಿತ್ರವಾದುದು. ಅದನ್ನು ಎಷ್ಟು ಮುಚ್ಚಿಟ್ಟುಕೊಳ್ಳುತ್ತೀರೋ ಅಷ್ಟು ಉತ್ತಮ ಎಂದು ಹೇಳಿದ್ದರು. ಸಮಸ್ಯೆ ಇರುವುದು ಹುಡುಗಿಯರಲ್ಲಿ ಅಲ್ಲ. ಸಮಸ್ಯೆ ಇರುವುದು ಹುಡುಗರಲ್ಲಿ. ನಿಮ್ಮ ತಾಯಿ, ತಂಗಿ, ಪತ್ನಿಯನ್ನು ಹುಡುಗರು ಆ ದೃಷ್ಟಿಯಿಂದ ನೋಡುವುದು ನನಗೆ ಇಷ್ಟ ಆಗುವುದಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದರು. ಸಲ್ಲು ಈ ಮಾತಿಗೆ ಚೇತನ್ ವಿರೋಧ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ದೇಹವು ಅಮೂಲ್ಯ, ದೇಹವನ್ನು ಅವರು ಹೆಚ್ಚು ಮುಚ್ಚಿಕೊಂಡಷ್ಟೂ ಒಳ್ಳೆಯದು ಎಂದು ಫಿಲ್ಮ್ ಸ್ಟಾರ್ ಸಲ್ಮಾನ್ ಖಾನ್ ಹೇಳಿದ್ದಾರೆ. ಅವರ ಈ ಮಾತು ಅತ್ಯಂತ ವ್ಯಂಗ್ಯವಾಗಿ ಕಾಣುತ್ತಿದೆ. ತನ್ನ ವೈಯಕ್ತಿಕ ದುರ್ವರ್ತನೆಗಳು ಮತ್ತು ಮಹಿಳೆಯರ ದೇಹದೊಂದಿಗೆ ಪ್ರಶ್ನಾರ್ಹ ವಿಧಾನಗಳಿಗೆ ಹೆಸರುವಾಸಿಯಾಗಿರುವ ಸಲ್ಮಾನ್ ಖಾನ್, ಈಗ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂಬುದರ ಕುರಿತು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ ಎಂದು ಚೇತನ್ ಸಿಡಿದೆದ್ದಿದ್ದಾರೆ.

ಸಲ್ಮಾನ್ ಖಾನ್ ಈ ರೀತಿ ಮಾತನಾಡುವುದರಿಂದ ಅವರ ಅಜ್ಞಾನ, ಬೂಟಾಟಿಕೆ, ಮತ್ತು ಪುರಷಪ್ರಧಾನ ಮನಸ್ಥಿತಿಯು ಹೆಚ್ಚು ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಚೇತನ್ ಅಹಿಂಸ ಅಸಮಾಧಾನ ಹೊರಹಾಕಿದ್ದಾರೆ.

Share This Article