ಕನ್ನಡ ಕಿರುತೆರೆ ಮತ್ತು ತೆಲುಗಿನ ಟಿವಿ ಪರದೆಯಲ್ಲಿ ಮೋಡಿ ಮಾಡುತ್ತಿರುವ ಚಂದು ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ನಟ ಚಂದು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಚಂದು ಪತ್ನಿ ಶಾಲಿನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸಾಕಷ್ಟು ಸಿನಿಮಾ, ಸೀರಿಯಲ್‌ಗಳ ಮೂಲಕ ಸಂಚಲನ ಮೂಡಿಸಿರುವ ನಟ ಚಂದು ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚಂದು ಗೌಡ ಪತ್ನಿ ಶಾಲಿನಿ ನಿನ್ನೆ (ಆಗಸ್ಟ್ 14)ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ:ರಾಕೇಶ್ ಮೇಲೆ ನನಗೆ ಫೀಲಿಂಗ್ಸ್ ಇದೆ ಎಂದು ಬಹಿರಂಗವಾಗಿ ಹೇಳಿಕೊಂಡ ಸೋನು ಗೌಡ
ನಟ ಚಂದು ಗೌಡ ಅವರು ಶಾಲಿನಿ ಜತೆ ಅಕ್ಟೋಬರ್ 2020ಕ್ಕೆ ಹಸೆಮಣೆ ಏರಿದ್ದರು. ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಚಂದು ಮತ್ತು ಶಾಲಿನಿ ಕಾಲಿಟ್ಟಿದ್ದರು. ಈ ಮುದ್ದು ಮಗಳ ಆಗಮನದಿಂದ ಸಂಭ್ರಮ ಮನೆ ಮಾಡಿದೆ.
Live Tv