ಮಾನವೀಯತೆಗೂ ಕಾರು ನಿಲ್ಲಸದೇ ಕಾಲ್ಕಿತ್ತ ಚಂದ್ರಪ್ರಭಾ ಬಗ್ಗೆ ಯುವಕನ ತಾಯಿ ಅಸಮಾಧಾನ

By
1 Min Read

‘ಗಿಚ್ಚಿ ಗಿಲಿ ಗಿಲಿ’ ವಿನ್ನರ್ ಚಂದ್ರಪ್ರಭಾ (Chandraprabha) ಅವರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪ್ರಕರಣದ ವಿಚಾರವಾಗಿ ಸವಾರ ಮಾಲ್ತೇಶ್ ತಾಯಿ ಗಂಗಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅಪಘಾತದ ಬಳಿಕ ಮಾನವೀಯತೆಗೂ ಕಾರು ನಿಲ್ಲಿಸದೇ ಚಂದ್ರಪ್ರಭಾ ಎಸ್ಕೇಪ್ ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ನಗರದ KSRTC ನಿಲ್ದಾಣದ ಬಳಿ ಹಿಟ್ & ರನ್ ಅಪಘಾತ(Accident) ಸಂಭವಿಸಿದೆ. ಇದೀಗ ಗಂಭೀರ ಸ್ಥಿತಿಯಲ್ಲಿರುವ ಯುವಕ ಮಾಲ್ತೇಶ್ (Malthesh) ಬಗ್ಗೆ ತಾಯಿ ಕಣ್ಣೀರಿಟ್ಟಿದ್ದಾರೆ.

ಅಪಘಾತಕ್ಕೆ ಒಳಗಾಗಿರುವ ಮಾಲ್ತೇಶ್ ಅವರ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರಿನ ಬಟ್ಟೆ ಅಂಗಡಿಯಲ್ಲಿ ಕಳೆದ 3 ವರ್ಷಗಳಿಂದ ಮಗ ಕೆಲಸ ಮಾಡುತ್ತಾನೆ. ಸೆ.4ರಂದು ರಾತ್ರಿ 11 ಗಂಟೆಗೆ ಚಂದ್ರಪ್ರಭಾ ಕಾರಿನಲ್ಲಿ ಮಗನ ಬೈಕ್‌ಗೆ ಗುದ್ದಿ ಹೋಗಿದ್ದಾರೆ. ಮಾನವೀಯತೆಗೂ ಏನಾಗಿದೆ ನೋಡಲು ಇದುವೆರೆಗೂ ಬಂದಿಲ್ಲ ಎಂದು ಮಾಲ್ತೇಶ್ ತಾಯಿ ಕಣ್ಣೀರಿಟ್ಟಿದ್ದಾರೆ. ಮಗ ಮಾತಾನಾಡೋಲ್ಲ, ಸದ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ:ಸನಾತನ ಧರ್ಮದ ಕುರಿತಾಗಿ ಉದಯ್‌ನಿಧಿ ಸ್ಟಾಲಿನ್‌ ಹೇಳಿಕೆಗೆ ಪ್ರಥಮ್‌ ಕಿಡಿ

ಚಿಕ್ಕಮಗಳೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಚಿಕ್ಕಮಗಳೂರು ಸಮೀಪದ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮುಗಿಸಿ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮಾಲ್ತೇಶ್‌ಗೆ ಏನಾಯಿತು ಎಂದು ನೋಡುವ ಸೌಜನ್ಯ ಕೂಡ ತೋರಿಲ್ಲ. ಈ ಕಾರು ಚಂದ್ರಪ್ರಭಾ ಅವರಿಗೆ ಸೇರಿದ್ದಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರ ಆಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್