ನಟ ಚಲಕಿ ಛಂಟಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

Public TV
1 Min Read

ತೆಲುಗು (Telugu) ಸಿನಿಮಾ ರಂಗದ ಜನಪ್ರಿಯ ಹಾಸ್ಯನಟ ಚಲಕಿ ಛಂಟಿಗೆ (Chalaki Chanti) ಹೃದಯಾಘಾತವಾಗಿದ್ದು (Heart Attack), ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರವೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಕೂಡಲೇ ಅವರನ್ನು ಹೈದರಾಬಾದ್ (Hyderabad) ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ವೈದ್ಯರ ಮಾಹಿತಿಯ ಪ್ರಕಾರ ಚಲಕಿ ಆರೋಗ್ಯ ಸ್ಥಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರಂತೆ. ಮೊದಲು ಚಲಕಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ. ವೈದ್ಯರು ತಪಾಸಣೆ ವೇಳೆ ಹಾರ್ಟ್ ಅಟ್ಯಾಕ್ ಆಗಿರುವುದು ದೃಢಪಟ್ಟಿದೆ. ಕೂಡಲೇ ಅವರಿಗೆ ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದಾರೆ.  ಇದನ್ನೂ ಓದಿ:ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಚಲಕಿ ಅವರ ನಿಜವಾದ ಹೆಸರು ವಿನಯ್ ಮೋಹನ್. ನಟನೆ ಕಾರಣದಿಂದಾಗಿ ಹೆಸರು ಬದಲಾಯಿಸಿಕೊಂಡಿದ್ದಾರೆ. ಬಿಗ್ ಬಾಸ್ (Bigg Boss)ತೆಲುಗು 6ನೇ ಆವೃತ್ತಿಯಲ್ಲಿ ಇವರು ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ, ಹಲವಾರು ಕಾಮಿಡಿ ಟಿವಿ ಶೋಗಳನ್ನು ಇವರು ಮಾಡಿದ್ದಾರೆ.

Share This Article