ಅರ್ಜುನ್ ಸರ್ಜಾ ಪುತ್ರಿ ಮದುವೆ- ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

Public TV
1 Min Read

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ ಸರ್ಜಾ (Aishwarya Sarja) ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಜೂನ್ 10ರಂದು ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಐಶ್ವರ್ಯಾ ಮತ್ತು ಉಮಾಪತಿ ಮದುವೆ ಅದ್ಧೂರಿಯಾಗಿ ಜರುಗಲಿದೆ. ಜೂನ್ 14ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದ ಬಾಲಯ್ಯಗೆ ಕಾಜಲ್ ವಿಶ್

ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ (Umapathy Ramaiah) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು. ಈಗ ಜೂನ್ 10ಕ್ಕೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ನಟಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಾಧವನ್ ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ- ತಮಿಳು ಚಿತ್ರ ಮಾಡ್ತಿದ್ದಾರಾ ನಟಿ?

ಮಗಳ ಮದುವೆಗೆ ಕನ್ನಡದ ಹೆಸರಾಂತ ನಟ ಜಗ್ಗೇಶ್ ಸೇರಿದಂತೆ ಅನೇಕರಿಗೆ ಆಮಂತ್ರಣ ನೀಡಿದ್ದಾರೆ ಅರ್ಜುನ್ ಸರ್ಜಾ ದಂಪತಿ. ಸ್ಯಾಂಡಲ್‌ವುಡ್ ಮತ್ತು ಸೌತ್‌ನ ಅನೇಕ ನಟ, ನಟಿಯರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿರುವ ಗಣ್ಯರಿಗೆ ಮದುವೆ ಆಹ್ವಾನ ನೀಡಿದ್ದಾರೆ.

ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.

Share This Article