ಮಗಳು ಐಶ್ವರ್ಯಾ ಚಿತ್ರಕ್ಕೆ ಅರ್ಜುನ್ ಸರ್ಜಾ ಆ್ಯಕ್ಷನ್ ಕಟ್

Public TV
2 Min Read

ಟ ಅರ್ಜುನ್ ಸರ್ಜಾ(Arjun Sarja) ಪುತ್ರಿ ಐಶ್ವರ್ಯಾ(Aishwarya Sarja) ಅವರು ತಮಿಳು ನಟ ಉಮಾಪತಿ ರಾಮಯ್ಯ ಜೊತೆ ಮದುವೆಯಾಗ್ತಿದ್ದಾರೆ (Wedding) ಎಂಬ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಆದರೆ ಈಗ ನಟನೆಯತ್ತ ಐಶ್ವರ್ಯಾ ಮುಖ ಮಾಡಿದ್ದಾರೆ. ಮಗಳಿಗೆ ನಿರ್ದೇಶನ ಮಾಡೋದಕ್ಕೆ ಅರ್ಜುನ್ ಅರ್ಜಾ ರೆಡಿಯಾಗಿದ್ದಾರೆ.

‘ಪ್ರೇಮಬರಹ’ (Premabaraha) ಸಿನಿಮಾ ಮೂಲಕ ಕನ್ನಡ ಮತ್ತು ಕಾಲಿವುಡ್‌ಗೆ (Kollywood) ಪರಿಚಿತರಾದ ನಟಿ ಐಶ್ವರ್ಯಾ ಸರ್ಜಾ ಅವರು ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಅರ್ಜುನ್ ಸರ್ಜಾ ಅವರು ನಿರ್ದೇಶನದ ಜೊತೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಒಂದೊಳ್ಳೆ ಪ್ರೇಮ ಕಥೆಯನ್ನ ತೆರೆಯ ಮೇಲೆ ತೋರಿಸಲು ರೆಡಿಯಾಗಿದ್ದಾರೆ. ಈಗಾಗಲೇ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಮುಂದಿನ ಸೋಮವಾರದಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

ಬಹುಭಾಷೆಗಳಲ್ಲಿ ಮೂಡಿ ಬರುವ ಈ ಚಿತ್ರಕ್ಕೆ ಐಶ್ವರ್ಯಾ ಸರ್ಜಾಗೆ ಉಪೇಂದ್ರ (Upendra) ಅವರ ಅಣ್ಣನ ಮಗ ನಿರಂಜನ್ (Niranjan) ಸುಧೀಂದ್ರ ಅವರು ಹೀರೋ ಆಗಿ ಫೈನಲ್ ಆಗಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ರಾಜ್, ಬಾಹುಬಲಿ ಖ್ಯಾತಿಯ ಕಟ್ಟಪ್ಪ, ಜಗಪತಿ ಬಾಬು ಸೇರಿದಂತೆ ಹಲವರು ನಟಿಸಿಲಿದ್ದಾರೆ. ಇದನ್ನೂ ಓದಿ:‘ಕಾರ್ತಿಕೇಯ 2’ ನಿರ್ದೇಶಕನ ಜೊತೆ ಕೈ ಜೋಡಿಸಿದ ನಾಗಚೈತನ್ಯ

ಈ ವಿಚಾರ ಅರ್ಜುನ್ ಸರ್ಜಾ ಅವರ ಕಡೆಯಿಂದಲೇ ಕನ್ಫರ್ಮ್ ಆಗಿದೆ. ಕಳೆದ ವಾರ ಹೈದರಾಬಾದ್‌ನಲ್ಲಿ ಚಿತ್ರದ ಶೂಟಿಂಗ್ ಶುರು ಮಾಡಲು ಅರ್ಜುನ್ ಸರ್ಜಾ ತನ್ನ ಬಳಗದ ಜೊತೆ ಹೈದರಾಬಾದ್ ಗೆ ಹಾರಿದ್ದರು. ಆದರೆ ಅಲ್ಲಿ ನಿರಂತರ ಮಳೆಯಾದ ಕಾರಣ ಮುಂದಿನ ಸೋಮವಾರದಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಶೆಡ್ಯೂಲ್ ಪ್ಲಾö್ಯನ್ ಮಾಡಿರುವ ಅರ್ಜುನ್ ಸರ್ಜಾ ಶೀಘ್ರದಲ್ಲೇ ಚಿತ್ರದ ಟೈಟಲ್ ಫೈನಲ್ ಮಾಡಲಿದ್ದಾರೆ.

ಮೊದಲ ಬಾರಿಗೆ ಐಶ್ವರ್ಯಾ- ನಿರಂಜನ್ ತೆರೆಯ ಮೇಲೆ ಜೋಡಿಯಾಗುತ್ತಿದ್ದು, ನವಿರಾದ ಪ್ರೇಮಕಥೆ ಜೊತೆಗೆ ಆ್ಯಕ್ಷನ್ ಕೂಡ ಇರಲಿದೆ. ಸದ್ಯ ಈ ನ್ಯೂಸ್ ಕೇಳಿ ಸಿನಿ ಪ್ರಿಯರು ಥ್ರಿಲ್ ಆಗಿದ್ದಾರೆ. ನಯಾ ಜೋಡಿಯನ್ನ ನೋಡೋಕೆ ಕಾಯ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್