ಭಾವಿಪತಿಗೆ ಸಿಹಿಮುತ್ತು ಕೊಟ್ಟು, ನಿಶ್ಚಿತಾರ್ಥದ ಸುದ್ದಿ ಹಂಚಿಕೊಂಡ ಅನುರಾಗ್‌ ಕಶ್ಯಪ್‌ ಪುತ್ರಿ

Public TV
2 Min Read

ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಟ ಅನುರಾಗ್ ಕಶ್ಯಪ್ (Anurag Kashyap) ಅವರ ಪುತ್ರಿ ಆಲಿಯಾ ಕಶ್ಯಪ್ (Aaliyah Kashyap)  ಅವರು ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ಬಹುಕಾಲದ ಗೆಳೆಯನ ಜೊತೆ ಎಂಗೇಜ್ ಆಗಿರುವ ಆಲಿಯಾ ಇದೀಗ ಭಾವಿ ಪತಿ ಜೊತೆಗಿನ ಲಿಪ್‌ಲಾಕ್ ಫೋಟೋ ಶೇರ್ ಮಾಡಿ, ಎಂಗೇಜ್ ಆಗಿರುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ.

ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ ಕಶ್ಯಪ್ ಯೂಟ್ಯೂಬರ್ (Youtuber) ಆಗಿ ತಮ್ಮದೇ ಶೈಲಿಯಲ್ಲಿ ಗುರುತಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಶೇನ್ ಗ್ರೆಗೊಯಿರ್ (Shane Gregoire)  ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈಗ ವಿದೇಶದಲ್ಲಿ ಆಲಿಯಾ ಮೇ.20ರಂದು ಶೇನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತು ಶೇರ್ ಮಾಡಿರುವ ಪೋಸ್ಟ್ನಲ್ಲಿ ಒಂದು ಫೋಟೋದಲ್ಲಿ ಅವರ ಎಂಗೇಜ್‌ಮೆಂಟ್ ರಿಂಗ್ ಹೈಲೈಟ್ ಆಗಿದೆ. ತಮ್ಮ ಸುಂದರವಾದ ವಜ್ರದ ಉಂಗುರವನ್ನು ಆಲಿಯಾ ಅವರು ಹೆಮ್ಮೆಯಿಂದ ತೋರಿಸಿದ್ದಾರೆ. ಎರಡನೇ ಫೋಟೋದಲ್ಲಿ ಅವರು ಭಾವಿ ಪತಿಗೆ ಕಿಸ್ ಮಾಡುತ್ತಿರುವ ಫೋಟೋ ಇದೆ.

ಇಂಡೋನೇಷ್ಯಾದ ಬಾಲಿಯಲ್ಲಿರುವ (Bali) ಸುಂದರವಾದ ಪರಿಸರದಲ್ಲಿ ಆಲಿಯಾ ಕಶ್ಯಪ್ ಮತ್ತು ಶೇನ್ ಗ್ರೆಗೊಯಿರ್ ಅವರು ಪರಸ್ಪರ ಚುಂಬಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಮಗಳ ಫೋಟೋ ನೋಡಿ ಅನುರಾಗ್ ಕಶ್ಯಪ್ ಅವರು ಮೂರು ಹಾರ್ಟ್ ಸಿಂಬಲ್ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಭರವಸೆ ಮೂಡಿಸುವ ಲವ್ ಯೂ ಅಭಿ

 

View this post on Instagram

 

A post shared by aaliyah (@aaliyahkashyap)

ನನ್ನ ಜಿವನದ ಪ್ರೀತಿ ನೀನು. ನಿಜವಾದ ಮತ್ತು ಅಪಾರವಾದ ಪ್ರೀತಿ ಹೇಗಿರುತ್ತದೆ ಎಂದು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ನಿನ್ನ ಪ್ರೀತಿಗೆ ಒಪ್ಪಿಗೆ ನೀಡಿದ್ದು ನಾನು ಮಾಡಿದ ಅತ್ಯಂತ ಸುಲಭವಾದ ಕೆಲಸ. ನನ್ನ ಉಳಿದ ಜೀವನವನ್ನು ನಿನ್ನೊಂದಿಗೆ ಕಳೆಯಲು ನಾನು ಕಾತುರಳಾಗಿದ್ದೇನೆ. ನೀನೇ ನನ್ನ ಪ್ರೀತಿ ಎಂದು ಆಲಿಯಾ ಕಶ್ಯಪ್ ಅವರು ಪೋಸ್ಟ್ ಮಾಡಿದ್ದಾರೆ. ಅನುರಾಗ್ ಕಶ್ಯಪ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಮಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆಕೆ ಈಗ ಬೆಳೆದಿದ್ದಾಳೆ. ಎಂಗೇಜ್‌ಮೆಂಟ್ ಆಗುವ ಮಟ್ಟಕೆ ಬೆಳೆದಿದ್ದಾಳೆ ಎಂದು ಅವರು ಅಡಿಬರಹ ನೀಡಿದ್ದಾರೆ.

Share This Article