ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ

Public TV
1 Min Read

– ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ವಿಷ್ಣು ಅಳಿಯ ಅನಿರುದ್ಧ್‌

ದಿವಂಗತ ಸಾಹಸಸಿಂಹ ವಿಷ್ಣುವರ್ಧನ್‌ (Vishnuvardhan) ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ಪ್ರದಾನಕ್ಕೆ ಮನವಿ ಸಲ್ಲಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣು ಅಳಿಯ ಅನಿರುದ್ಧ್‌ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ 75ನೇ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿ, ಇದು ಅವರ ಅಪಾರ ಅಭಿಮಾನಿಗಳ ಆಕಾಂಕ್ಷೆ ಎಂದು ಅನಿರುದ್ಧ್‌ (Aniruddha Jatkar) ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ತಲೈವಾನ್ ತಲೈವಿ ಟ್ರೈಲರ್‌ ರಿಲೀಸ್ – ವಿಜಯ್ ಸೇತುಪತಿ-ನಿತ್ಯಾ ಮಸ್ತ್ ಮಸ್ತ್..!

ಚಲನಚಿತ್ರ ರಂಗ, ಕಲಾರಂಗಕ್ಕೆ ವಿಷ್ಣು ಅವರ ಕೊಡುಗೆ ಅಪಾರ. ಇನ್ನೂ ಅವರಿಗೆ ಕೇಂದ್ರದಿಂದಲೂ ಪದ್ಮಶ್ರೀ ಪ್ರಶಸ್ತಿ ಕೊಟ್ಟಿಲ್ಲ. ಕರ್ನಾಟಕ ಸರ್ಕಾರದಿಂದಲೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿಲ್ಲ. ಹೀಗಾಗಿ, ಅವರ 75ನೇ ವರ್ಷದ ವಿಶೇಷ ಸಂದರ್ಭದಲ್ಲಾದರೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಂತೆ ಅನಿರುದ್ಧ್ ಮನವಿ ಮಾಡಿದ್ದಾರೆ.

Share This Article