ಅನಿಲ್ ಕಪೂರ್‌ರನ್ನು ಭೇಟಿಯಾದ ‘ಗೇಮ್ ಜೇಂಜರ್’ ನಿರ್ದೇಶಕ- ಹೊಸ ಚಿತ್ರ ಅನೌನ್ಸ್?

Public TV
1 Min Read

ರಾಮ್ ಚರಣ್ ನಟನೆಯ ‘ಗೇಮ್ ಜೇಂಜರ್’ (Game Changer) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವ ಡೈರೆಕ್ಟರ್ ಶಂಕರ್ ಈಗ ಬಾಲಿವುಡ್ ನಟ ಅನಿಲ್ ಕಪೂರ್‌ರನ್ನು (Anil Kapoor) ಭೇಟಿಯಾಗಿದ್ದಾರೆ. ಇವರ ಜೊತೆ ಹೊಸ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ‌ಎಸ್.ಶಂಕರ್- ಅನಿಲ್ ಕಪೂರ್ ಫೋಟೋಗಳು ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ, ‘ನಾಯಕ್ 2’ ಚಿತ್ರಕ್ಕೆ ತಯಾರಿ ಮಾಡಲಾಗುತ್ತಿದೆ ಎನ್ನಲಾಗಿದೆ. ಕೆಲದಿನಗಳ ಹಿಂದೆ ಕೂಡ ಅನಿಲ್‌ರನ್ನು ಶಂಕರ್ ಭೇಟಿಯಾಗಿ ಚರ್ಚಿಸಿದ್ದರು. ಹಾಗಾಗಿ ಇಬ್ಬರೂ ಮತ್ತೆ ಸಿನಿಮಾ ಮಾಡುವ ಕುರಿತು ಗುಸು ಗುಸು ಶುರುವಾಗಿದೆ.‌ ಇದನ್ನೂ ಓದಿ:‘ಕಲ್ಪನಾ 2’ ಚಿತ್ರದ ಖಳನಟ ಪ್ರಕಾಶ್ ಹೆಗ್ಗೋಡು ನಿಧನ

‘ನಾಯಕ್ 2’ (Nayak 2) ಚಿತ್ರದಲ್ಲಿ ಅನಿಲ್ ಕಪೂರ್ ಜೊತೆ ಕರೀನಾ (Kareena) ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೊಸ ಬಗೆಯ ಕಥೆಯ ಜೊತೆ ಬರಲು ಶಂಕರ್ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ಗೇಮ್ ಜೇಂಜರ್’ ಚಿತ್ರದ ಕೆಲಸ ಕೂಡ ಪೂರ್ಣಗೊಂಡಿದ್ದು, ಇದೀಗ ನಾಯಕ್ 2 ಚಿತ್ರ ಶಂಕರ್ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಪ್ಯಾರಿಸ್‌ನಲ್ಲಿ ಪತಿಗೆ ಲಿಪ್‌ಲಾಕ್ ಮಾಡಿದ ‘ಕಭಿ ಖುಷಿ ಕಭಿ ಗಮ್’ ನಟಿ

2001ರಲ್ಲಿ ‘ನಾಯಕ್’ ಸಿನಿಮಾದಲ್ಲಿ ಅನಿಲ್ ಕಪೂರ್, ರಾಣಿ ಮುಖರ್ಜಿ, ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಎಸ್. ಶಂಕರ್ ಅವರೇ ಮೊದಲ ಭಾಗವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Share This Article