ಎನ್‍ಟಿಆರ್ ಕುಟುಂಬಕ್ಕೆ ನಲ್ಗೊಂಡ ಮಾರ್ಗ ಶಾಪವೇ?

Public TV
2 Min Read

ಹೈದರಾಬಾದ್: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್‍ಟಿ ರಾಮರಾವ್ ಕುಟುಂಬಕ್ಕೆ ನಲ್ಗೊಂಡ ಹೆದ್ದಾರಿ ಮಾರ್ಗ ಶಾಪವೇ ಎನ್ನುವ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಕುಟುಂಬದ ಮೂವರು ಸದಸ್ಯರಿಗೂ ಇದೇ ಮಾರ್ಗದಲ್ಲಿ ಅಪಘಾತ ಸಂಭವಿಸಿದ್ದರಿಂದ ಈ ಪ್ರಶ್ನೆ ಮತ್ತೆ ಎದ್ದಿದೆ.

ಇಂದು ನಡೆದ ಅಪಘಾತದಲ್ಲಿ ನಟ ಹರಿಕೃಷ್ಣ ಸಾವನ್ನಪ್ಪಿದ್ದು, ಎನ್‍ಟಿಆರ್ ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳಿಗೆ ತೀವ್ರ ಅಘಾತವನ್ನುಂಟು ಮಾಡಿದೆ.

ಮಾಜಿ ಸಿಎಂ, ನಟ ಎನ್‍ಟಿಆರ್ ಸೇರಿದಂತೆ ಇಡೀ ಕುಟುಂಬ ಸದಸ್ಯರಿಗೆ ಕಾರು ಚಾಲನೆಯ ಕುರಿತು ಹೆಚ್ಚಿನ ಆಸಕ್ತಿ ಇದ್ದು, ನಟರಾಗಿದ್ದ ಎನ್‍ಟಿಆರ್ ರಾಜಕೀಯ ಪ್ರವೇಶ ಮಾಡಿ `ಚೈತನ್ಯ ಯಾತ್ರೆ’ ಆರಂಭಿಸಿದ ವೇಳೆ ಸ್ವತಃ ಎನ್‍ಟಿಆರ್ ಪುತ್ರ ಹರಿಕೃಷ್ಣ ಅವರೇ ಯಾತ್ರೆಯ ವಾಹನ ಚಲಾಯಿಸಿ ಶಕ್ತಿ ತುಂಬಿದ್ದರು. ಅಲ್ಲದೇ ತಂದೆ ಸಿನಿಮಾ ಚಿತ್ರೀಕರಣಕ್ಕೆ ತೆರಳುವ ವೇಳೆಯೂ ಅವರೇ ಕಾರು ಚಲಾಯಿಸುತ್ತಿದ್ದರು.

ಆದರೆ ಇಂದು ನಡೆದ ಅಪಘಾತ ಮತ್ತೆ ಎನ್‍ಟಿಆರ್ ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. 2009 ರಲ್ಲಿಯೂ ಸಹ ನಲ್ಗೊಂಡ ಜಿಲ್ಲೆಯ ಮಾರ್ಗದಲ್ಲೇ ಹರಿಕೃಷ್ಣ ಮಗ ಜೂನಿಯರ್ ಎನ್‍ಟಿಆರ್ ಅಪಘಾತದಲ್ಲಿ ಗಾಯಗೊಂಡಿದ್ದರು. ಅಲ್ಲದೇ 4 ವರ್ಷಗಳ ಹಿಂದೆ ಹರಿಕೃಷ್ಣ ಮಗ ಜಾನಕಿರಾಮ್ ಕೂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಸದ್ಯ ಈ ಘಟನೆಗಳಿಂದ ಎನ್‍ಟಿಆಆರ್ ಅಭಿಮಾನಿಗಳು ಸಹ ಶಾಕ್ ಗೆ ಒಳಗಾಗಿದ್ದು, ನಲ್ಗೊಂಡ ಮಾರ್ಗವೇ ಶಾಪವಾಗಿದೆಯೇ ಎನ್ನುವ ಪ್ರಶ್ನೆಯನ್ನು ಇಟ್ಟು ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಇದನ್ನು ಓದಿ: ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು

ಅಪಘಾತದಲ್ಲಿ ಹರಿಕೃಷ್ಣ ಸಾವನ್ನಪ್ಪಿರುವ ಸುದ್ದಿ ಹೊರಬೀಳುತ್ತಿದಂತೆ ಪುತ್ರರಾದ ನಟ ಜೂ.ಎನ್‍ಟಿಆರ್, ಕಲ್ಯಾಣ ರಾಮ್ ಹಾಗೂ ಕುಟುಂಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ. ಅಲ್ಲದೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೂಡ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದಾರೆ. ಹರಿಕೃಷ್ಣ ಅವರ ಸಾವಿಗೆ ಟಾಲಿವುಡ್ ಕಲಾವಿದರು ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವು ನಟರು ಸಂತಾಪ ಸೂಚಿಸಿದ್ದಾರೆ. ಇದನ್ನು ಓದಿ: ತೆಲಂಗಾಣದ ನಲ್ಗೊಂಡ ಬಳಿ ಅಪಘಾತ – ಜ್ಯೂನಿಯರ್ NTR ತಂದೆ ನಂದಮೂರಿ ಹರಿಕೃಷ್ಣ ದುರ್ಮರಣ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *