ಸಿಎಂ ಕುಮಾರಸ್ವಾಮಿ ಪರ ರೆಬೆಲ್‍ಸ್ಟಾರ್ ಅಂಬಿ ಬ್ಯಾಟಿಂಗ್!

Public TV
1 Min Read

ಮಂಡ್ಯ: ಆರೋಗ್ಯದ ಕಾರಣದಿಂದ ರಾಜಕಾರಣದಿಂದ ದೂರ ಉಳಿದಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಅಂಬರೀಶ್ ಈಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟ ಕುಟುಂಬದವನ್ನು ಭೇಟಿ ಮಾಡಿ ಸಾಂತ್ವಾನ ಹೇಳಲು ಅಂಬರೀಶ್ ಅವರು ಆಗಮಿಸಿದ್ದು, ತಮ್ಮ ಅಭಿಮಾನಿಯನ್ನು ನೆನೆದು ಭಾವುಕರಾಗಿದ್ದರು. ಇದೇ ವೇಳೆ ಅಂಬರೀಶ್ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ.

ಕುಮಾರಸ್ವಾಮಿಗೆ ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ಸಿಗೆ ಕುಮಾರಸ್ವಾಮಿ ಬೇಕು. ಚುನಾವಣೆಯಿಂದ ದೂರ ಇದ್ದರೂ, ನಾನು ರಾಜಕೀಯದಲ್ಲಿ ಇದ್ದೆ ಇರುತ್ತೇನೆ ಎಂದು ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಪರ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಕಾಂಗ್ರೆಸ್ಸಿನವರು ಕುಮಾರಸ್ವಾಮಿಗೆ ಆಡಳಿತ ನಡೆಸಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ತಮ್ಮ ಮಗ ಅಭಿಷೇಕ್‍ನನ್ನು ಮಾತ್ರ ತಾವಿರುವವರೆಗೂ ರಾಜಕೀಯಕ್ಕೆ ತರಲ್ಲ ಎಂದು ಹೇಳಿದರು. ಇದೇ ವೇಳೆ ರಮ್ಯಾ ಬಗ್ಗೆ ಎದ್ದಿರುವ ಊಹಾಪೋಹದ ಬಗ್ಗೆಯೂ ತಾಳ್ಮೆಯಿಂದ ಮಾತನಾಡಿದ ಅಂಬಿ, ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವ ರಮ್ಯಾ ಅವರ ಕೆಲಸವೇ ಎದುರಾಳಿಗಳ ವೀಕ್ನೆಸ್ ತಿಳಿಸಿ ನಮ್ಮ ಪಕ್ಷವನ್ನು ಮೇಲೆತ್ತೋದು. ಹೀಗಿದ್ದಾಗ ವಿವಾದ ಸಹಜ. ಆದರೆ ಅದಕ್ಕೆ ಹೆಚ್ಚು ಅವಕಾಶ ಕೊಡಬಾರದು ಅಷ್ಟೆ ಎಂದ್ರು.

ಮಂಡ್ಯ ಕಾಂಗ್ರೆಸ್ಸಿನ ನಾಯಕತ್ವದ ಬಗ್ಗೆ ಮಾತನಾಡಿದ ಅಂಬಿ, ನೆಹರೂ ನಂತರ ಕಾಂಗ್ರೆಸ್ಸಿನಲ್ಲಿ ಬೇರೆ ನಾಯಕರು ಬಂದಂತೆ, ನನ್ನ ನಂತರವೂ ಬೇರೆಯವರೂ ಮಂಡ್ಯ ಕಾಂಗ್ರೆಸ್ ಮುನ್ನಡೆಸುತ್ತಾರೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *