ಅಂಬಿಯ ಅಪಾಯದ ಭವಿಷ್ಯ ನುಡಿದಿದ್ದ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ

Public TV
2 Min Read

ಉಡುಪಿ: ಜಿಲ್ಲೆಯ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ನಟ ಅಂಬರೀಶ್ ಗೆ ಮೃತ್ಯುಂಜಯ ಹೋಮ ನಡೆಸಲು ಸೂಚನೆ ನೀಡಿದ್ದರು. ಈಗ ಸ್ವತಃ ಅವರೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಫೇಸ್ ಬುಕ್ ಪೋಸ್ಟ್:
ಇದಕ್ಕೇ ಹೇಳುವುದು ನಾವು ನಿಮಿತ್ತ ಮಾತ್ರ ಎಂದು. ಅಕ್ಟೋಬರ್ 10ರಂದು ಅಂಬರೀಶ್ ಅವರೊಡನೆ ಪ್ರಥಮ ಬಾರಿ ಫೋನಿನಲ್ಲಿ ಸಂಭಾಷಣೆ ಮಾಡಿದ್ದೆ. ದೊಡ್ಡಣ್ಣ ಅವರ ಮೂಲಕ ಪರಿಚಯವಾಯಿತು. ಜಾತಕ ನೋಡಿ, ಲಗ್ನಾಷ್ಟಮದಲ್ಲಿ ಶನಿಸಂಚಾರ ಕಾಲ, ದಶಾಧಿಪತಿ ಬುಧನಿಗೆ ಚತುರ್ಥದಲ್ಲಿ ಕೇತು ಇರುವುದು ಅಪಾಯ ಎಂದು ತಿಳಿದು ಅವರಿಗೆ ಮೃತ್ಯುಂಜಯ ಹೋಮ ಮತ್ತು ಆಶ್ಲೇಷಬಲಿ ಮಾಡಲು ಸೂಚಿಸಿದ್ದೆ. ಆ ಪ್ರಕಾರ ದಿನಾಂಕ 12ರಂದು ನನ್ನ ಮೂಲಕವೇ ಮಾಡುವುದೆಂದೂ ದಿನ ನಿಗದಿಯೂ ಆಯಿತು. ಆದರೆ ಆ ದಿನ ಬೆಂಗಳೂರಲ್ಲಿ ನನಗೆ ಜ್ವರ ಬಂದು ಆರೋಗ್ಯವೂ ಕೈ ಕೊಟ್ಟಿತು. ಆದರೂ ಮಾಡೇ ಬಿಡೋಣ ಅಂತ ನನ್ನ ಜತೆ ಬಂದಿದ್ದ ಪುರೋಹಿತರು ಹೇಳಿಯೂ ಇದ್ದರು. ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ

ಈ ಸಮಯದಲ್ಲಿ ಮಾನ್ಯ ಕೇಂದ್ರ ಸಚಿವ ಅನಂತಕುಮಾರ್ ಅವರ ಅಂತ್ಯಕ್ರಿಯೆಯ ಕಾರಣ ಮುಂದಿನ ಸಲ ಮಾಡೋಣ ಎಂದು ಅಂಬರೀಶ್ ಹೇಳಿದರು. ನಾನೂ ಇದೂ ಹೌದು ಎಂದು ಸುಮ್ಮನಾದೆ. ಈ ನಂತರ ಯಾವಾಗ ಮಾಡೋಣ ಎಂದು ಮತ್ತೆ ಕೇಳಿದ್ದರು. ನಾನು ಇನ್ನೂ ದಿನಾಂಕ ಕೊಡದೆ ಮುಂದೆ ಹಾಕಿದ್ದೆ. ಇದನ್ನೂ ಓದಿ: ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ

ಈಗ ನಮ್ಮ ನೆಚ್ಚಿನ ಅಂಬರೀಶ್ ಇನ್ನಿಲ್ಲ. ಇದನ್ನೇ ದೈವ ಚಿತ್ತ ಎನ್ನುವುದು. ನಾನೇನೂ ಜೀವ ಉಳಿಸುವವನಲ್ಲ. ಆದರೆ ಭಕ್ತಿಶ್ರದ್ಧೆಯಿಂದ ಮಾಡುವ ಆ ಹೋಮ ಪೂಜೆಗಳಿಗೆ ಆ ಶಕ್ತಿ ಇತ್ತು. ಹಾಗಾಗಿ ಆಯುಷ್ಯ ಮುಗಿದಿದ್ದಾಗ ಪೂಜೆ ಮಾಡುವ ಯೋಗ ಬರಲಿಲ್ಲ. ಅಂತೂ ಸಜ್ಜನರೊಬ್ಬರನ್ನು ಕಳೆದುಕೊಂಡ ದುಃಖವು ನನಗಿದೆ. ಹಾಗಾಗಿ ಇದನ್ನು ಬರೆಯಬೇಕೆಂದೆನಿಸಿತು. ಸಜ್ಜನರನ್ನು ಉಳಿಸಿಕೊಳ್ಳುವ ಯೋಗಭಾಗ್ಯವು ನಮಗೂ ಬೇಕು. ಅದು ಇಲ್ಲದಂತಾಯಿತು. ಅವರ ದಿವ್ಯಾತ್ಮಕ್ಕೆ ಅಕ್ಷಯ ಪುಣ್ಯಲೋಕ ಸಿಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.

ಅನಾರೋಗ್ಯದ ಕಾರಣ ಅಂಬರೀಶ್ ದಿನಾಂಕ 24ರಂದು ರಾತ್ರಿ ವಿಧಿವಶರಾಗಿದ್ದಾರೆ. ಇಂದು ಮಧ್ಯಾಹ್ನದ ನಂತರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಿಂದ ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ತಂದು ಪಾರ್ಥಿವ ಶರೀರರದ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *