‘ಪುಷ್ಪ 2’ ಸಿನಿಮಾ ರಿಲೀಸ್ ಆಗೋದು ಆಗಸ್ಟ್ ಅಲ್ಲ, ಮತ್ಯಾವಾಗ?

Public TV
2 Min Read

ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಬಗ್ಗೆ ಕೆಲದಿನಗಳಿಂದ ರಿಲೀಸ್ ಬಗ್ಗೆ ಗೊಂದಲ ಶುರುವಾಗಿದೆ. ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಮುಂದಕ್ಕೆ ಹೋಗಿದೆ. ಜೊತೆಗೆ ರಿಲೀಸ್ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.‌ ಇದನ್ನೂ ಓದಿ:ದರ್ಶನ್‌ ಗ್ಯಾಂಗ್‌ ಅಂದರ್‌ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್‌

ಇಡೀ ಚಿತ್ರತಂಡ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವುದರಿಂದ ಆಗಸ್ಟ್ 15ಕ್ಕೆ ಬಿಡುಗಡೆಯಾಗೋದು ಕಷ್ಟ ಎನ್ನಲಾಗ್ತಿದೆ. ಸ್ಟಾರ್ ನಟನ ಬಿಗ್ ಬಜೆಟ್ ಸಿನಿಮಾ ಆಗಿರೋದ್ರಿಂದ ಎಚ್ಚರಿಕೆಯಿಂದ ಕೆಲಸದಲ್ಲಿ ಲೋಪ ಬರದಂತೆ ಸಿನಿಮಾ ಪೂರ್ಣಗೊಳಿಸಬೇಕಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರಕ್ಕೂ ಸಮಯ ಮೀಸಲಿಡಬೇಕಿದೆ.

ಹಾಗಾಗಿ ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿದ್ದ ‘ಪುಷ್ಪ 2’ ಸಿನಿಮಾವನ್ನು ಡಿಸೆಂಬರ್‌ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ‘ಪುಷ್ಪ ಪಾರ್ಟ್ 1’ ಸಿನಿಮಾ ಡಿಸೆಂಬರ್ 17ರಂದು ರಿಲೀಸ್ ಆಗಿತ್ತು. ಹಾಗಾಗಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ.

ಅಂದಹಾಗೆ, ಈ ಹಿಂದೆ ತೆರೆಕಂಡ ‘ಪುಷ್ಪ ಪುಷ್ಪ’ ಟೈಟಲ್ ಸಾಂಗ್, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ ಕಪಲ್ ಸಾಂಗ್ ಮಿಲಿಯನ್ ಗಟ್ಟಲೇ ವಿವ್ಸ್ ಪಡೆದು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಆದರಿಂದಲೇ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ನಿರೀಕ್ಷೆ ಕೂಡ ದುಪ್ಪಟ್ಟಾಗಿತ್ತು. ಆದರೆ ಈಗ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬ ವಿಚಾರ ಕೇಳಿ ಫ್ಯಾನ್ಸ್ ನಿರಾಶರಾಗಿದ್ದಾರೆ. ಯಾವದಕ್ಕೂ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

ಇನ್ನೂ ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಹೀರೋ, ಸಾಮಾನ್ಯ ವ್ಯಕ್ತಿ ಆಗಿರುವ ಪುಷ್ಪರಾಜ್ ರಕ್ತ ಚಂದನದ ದಂಧೆಯಲ್ಲಿ ಸೇರಿಕೊಳ್ಳುತ್ತಾನೆ. ಆ ಬಳಿಕ ಆತ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾನೆ. ಎರಡನೇ ಭಾಗದಲ್ಲಿ ಇದೇ ಕಥೆ ಹೈಲೈಟ್ ಆಗಲಿದೆ. ರಕ್ತ ಚಂದನದ ದಂಧೆಯಲ್ಲಿ ಬೆಳೆದು ನಿಂತ ಮೇಲೆ ಸಿನಿಮಾದಲ್ಲಿ ಏನೆಲ್ಲಾ ತಿರುವು ಇರಲಿದೆ ಎಂಬುದನ್ನ ಪಾರ್ಟ್ 2ನಲ್ಲಿ ತೋರಿಸಲಾಗುತ್ತದೆ.

ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಅನಸೂಯ ಭಾರದ್ವಾಜ್, ಡಾಲಿ ಧನಂಜಯ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article