ಅಲ್ಲು ಅರ್ಜುನ್ ಮನೆ ಮೇಲೆ ದಾಳಿ- ಪ್ರತಿಭಟಿಸಿದ ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

Public TV
1 Min Read

‘ಪುಷ್ಪ 2′ ಕಾಲ್ತುಳಿತ ಕೇಸ್ ಹಿನ್ನೆಲೆ ಅಲ್ಲು ಅರ್ಜುನ್ (Allu Arjun) ಹೈದರಾಬಾದ್‌ನ ಜುಬಿಲಿ ಹಿಲ್ಸ್ ಮನೆಯ ಮೇಲೆ ಉಸ್ಮಾನಿಯಾ ವಿವಿಯ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ, ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಜುಬಿಲಿ ಹಿಲ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ:‘ಅಲ್ಲು ಅರ್ಜುನ್‌’ ಫ್ಯಾನ್ಸ್‌ಗೆ ಪುಷ್ಪರಾಜ್‌ ವಾರ್ನಿಂಗ್

‘ಪುಷ್ಪ 2’ ಪ್ರಿಮಿಯರ್ ವೇಳೆ ಕಾಲ್ತುಳಿತದಿಂದ ಸಾವನಪ್ಪಿದ ಮಹಿಳೆಯ ವಿಚಾರವಾಗಿ ಅಲ್ಲು ಅರ್ಜುನ್ ಮನೆ ಮುಂದೆ ಉಸ್ಮಾನಿಯಾ ವಿವಿಯ ವಿದ್ಯಾರ್ಥಿ ಸಮಿತಿಯಿಂದ ನ್ಯಾಯ ಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ. ಶ್ರೀತೇಜ ಕುಟುಂಬಕ್ಕೆ ನ್ಯಾಯ ಬೇಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಮನೆಯ ಟೊಮ್ಯಾಟೋ ಎಸೆದು ನಟನ ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ, ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಂದಹಾಗೆ, ಡಿ.4ರಂದು ‘ಪುಷ್ಪ 2’ ಸಿನಿಮಾ ಪ್ರಿಮಿಯರ್ ಶೋ ವೇಳೆ ಭಾಗಿಯಾಗಿದ್ದ ಅಲ್ಲು ಅರ್ಜುನ್ ನೋಡಲು ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ಜಮಾಯಿಸಿದರು. ಈ ವೇಳೆ ನೂಕು ನುಗ್ಗಲು ನಡೆದಿದೆ. ಆಗ ಕಾಲ್ತುಳಿತದಿಂದ ರೇವತಿ ಎಂಬ ಮಹಿಳೆ ಸಾವನಪ್ಪಿದ್ದಾರೆ.

Share This Article