ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ Pushpa 2 ಟ್ರೈಲರ್ ಇದೀಗ ರಿಲೀಸ್ ಆಗಿದೆ. ಅಲ್ಲು ಅರ್ಜುನ್ (ಏ.8)ರಂದು ಹುಟ್ಟುಹಬ್ಬವಾಗಿದ್ದು, ಒಂದು ದಿನ ಮುಂಚಿತವಾಗಿಯೇ ಪುಷ್ಪ 2 ಟ್ರೈಲರ್ ರಿಲೀಸ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪುಷ್ಪರಾಜನ ಅಬ್ಬರ ಜೋರಾಗಿದೆ. ಇದನ್ನೂ ಓದಿ: ಕರಣ್ ಜೋಹಾರ್ ವಿರುದ್ಧ ಮತ್ತೆ ಕೆಂಡಕಾರಿದ ಕಂಗನಾ ರಣಾವತ್
ಗುಂಡಿನಿಂದ ಗಾಯಗೊಂಡು ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರುತ್ತಾನೆ. ಪುಷ್ಪನಿಗಾಗಿ ಹುಡುಕಾಟ, ಹೊಡೆದಾಟ, ದಾಳಿ ನಡೆಯುತ್ತದೆ. ಎಷ್ಟು ದಿನವಾದ್ರೂ ಪುಷ್ಪ ಪತ್ತೆಯಾಗುವುದಿಲ್ಲ. ದಟ್ಟ ಅರಣ್ಯದಲ್ಲಿ ಹುಲಿಯೊಟ್ಟಿಗೆ ಗ್ರ‍್ಯಾಂಡ್ ಆಗಿ ಅಲ್ಲು ಅರ್ಜುನ್ ಎಂಟ್ರಿ ಕೊಡ್ತಾನೆ. ಪುಷ್ಪರಾಜನ ಖದರ್ ನೋಡಿ ಕಾಡಲ್ಲಿ ಪ್ರಾಣಿಗಳು ಎರಡೆಜ್ಜೆ ಹಿಂದೆ ಇಟ್ರೆ ಹುಲಿ ಬಂದಿದೆ ಅಂತಾ ಅರ್ಥ, ಹುಲಿನೇ ಎರಡೆಜ್ಜೆ ಹಿಂದೆ ಇಟ್ರೆ ಪುಷ್ಪ ಬಂದಿದ್ದಾನೆಂಬ ಬೆಂಕಿ ಡೈಲಾಗ್ ಮೂಲಕ ಅಲ್ಲು ಅರ್ಜುನ್ ದರ್ಶನವಾಗುತ್ತದೆ.
The #HuntForPushpa ends and ????????????????????????’???? ???????????????? ???????????????????????? ????
Happy Birthday to Icon Star @alluarjun ???? #HappyBirthdayAlluArjun #WhereIsPushpa? #Pushpa2TheRule @iamRashmika @aryasukku #FahadhFaasil @ThisIsDSP @MythriOfficial pic.twitter.com/O00pxLVDgb
— Sukumar Writings (@SukumarWritings) April 7, 2023
ಟ್ರೈಲರ್ ರಿಲೀಸ್‌ಗೂ ಮೊದಲು ರಿವೀಲ್ ಆಗಿದ್ದ ಪುಷ್ಪ ಪಾರ್ಟ್-2 ಗ್ಲಿಂಪ್ಸ್‌ಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಕಥಾನಕನೇ ನಾಪತ್ತೆಯಾಗಿದ್ದಾನೆ. ಹಾಗಿದ್ರೆ ಪುಷ್ಪರಾಜ್ ಎಲ್ಲಿ ಹೋದ ಅನ್ನೋ ಕ್ಯೂರಿಯಾಸಿಟಿಗೆ ಇದೀಗ ಟ್ರೇಲರ್‌ನಲ್ಲಿ ಉತ್ತರ ಸಿಕ್ಕಿದೆ. ಈ ಬಾರಿಯೂ ಕೂಡ ಸುಕುಮಾರ್ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುವ ಸೂಚನೆ ಕೊಟ್ಟಿದ್ದಾರೆ. ಮತ್ತೊಮ್ಮೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್- ಸುಕುಮಾರ್ ಜೋಡಿ ಬಾಕ್ಸಾಫೀಸ್ ಶೇಕ್ ಮಾಡೋದು ಪಕ್ಕಾ ಎಂದು ಟಾಲಿವುಡ್ ಮಂದಿ ಅಂತಿದ್ದಾರೆ. Pushpa 2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿ ಬರುತ್ತಿರುವ ಪುಷ್ಪ 2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.
ಕಳೆದ ವರ್ಷದ ವಿಶ್ವಾದ್ಯಂತ ತೆರೆಗೆ ಬಂದ ಪುಷ್ಪ ಸಿನಿಮಾ 400 ಕೋಟಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿತ್ತು. ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿ ಬೊಬ್ಬಿರಿದ್ದರು. ಅಲ್ಲು ಆಕ್ಟಿಂಗ್, ಸುಕುಮಾರ್ ಡೈರೆಕ್ಷನ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಬೆಳ್ಳಿಪರದೆಯಲ್ಲಿ ಅಖಂಡ ಗೆಲುವು ಕಂಡ ಪುಷ್ಪ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಿದೆ. ಪುಷ್ಪ ಸೀಕ್ವೆಲ್ ಹೇಗಿರುತ್ತದೆ ಎಂಬ ಕೌತಕದ ನಡುವೆ ಪುಷ್ಪ-2 ಅಂಗಳದಿಂದ ಹೊರ ಬಂದ ಟ್ರೈಲರ್ ಧಮಾಕ ಎಬ್ಬಿಸಿದೆ.