ದುಬೈ ಕಾರ್ ರೇಸ್‌ನಲ್ಲಿ ಗೆದ್ದು ಬೀಗಿದ ಅಜಿತ್ ಕುಮಾರ್

Public TV
1 Min Read

ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲಿ ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) 3ನೇ ಸ್ಥಾನ ಗಳಿಸಿದ್ದಾರೆ. ಗೆದ್ದ ಸಂಭ್ರಮದಲ್ಲಿ ಪತ್ನಿ ಶಾಲಿನಿಗೆ ಅಜಿತ್ ಮುತ್ತು ಕೊಟ್ಟಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ಹೋಟೆಲ್ ನೆಲಸಮ; ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಬಿತ್ತು ಎಫ್‌ಐಆರ್

ದುಬೈನಲ್ಲಿ ನಡೆದ 24H ಸಿರೀಸ್ ಕಾರ್ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಇದಕ್ಕಾಗಿ ಒಂದೂವರೆ ತಿಂಗಳಿಂದ ದುಬೈನಲ್ಲಿ ಪ್ರಾಕ್ಟೀಸ್ ಮಾಡಿದ್ದು, ಹಠ ಬಿಡದೇ ಕಾರ್ ರೇಸ್‌ನಲ್ಲಿ 3ನೇ ಸ್ಥಾನ ಗೆದ್ದು ಬೀಗಿದ್ದಾರೆ. 991 ಕೆಟಗರಿಯಲ್ಲಿ 3ನೇ ಸ್ಥಾನ, ಜಿಟಿ4 ಕೆಟಗರಿಯಲ್ಲಿ ‘ಸ್ಪಿರಿಟ್ ಆಫ್ ದಿ ರೇಸ್’ ಪ್ರಶಸ್ತಿ ಪಡೆದಿದ್ದಾರೆ.

ಗೆಲುವಿನ ಸಂಭ್ರಮದಲ್ಲಿ ಶಾಲಿನಿಗೆ ಮುತ್ತು ಕೊಟ್ಟ ವಿಡಿಯೋ ವೈರಲ್ ಆಗಿದೆ. ಭಾರತದ ಧ್ವಜ ಹಿಡಿದು ಬಹುಮಾನ ಸ್ವೀಕರಿಸಲು ಅಜಿತ್ ವೇದಿಕೆ ಹತ್ತಿದ್ದಾರೆ. ಅದಷ್ಟೇ ಅಲ್ಲ, ಅಜಿತ್‌ ಕಾರ್‌ ರೇಸ್‌ ಗೆದ್ದ ಸಂಭ್ರಮಕ್ಕೆ ಮಾಧವನ್‌ ಕೂಡ ಸಾಕ್ಷಿಯಾಗಿದ್ದಾರೆ. ಗೆಳೆಯನನ್ನು ತಬ್ಬಿ ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಇತ್ತೀಚೆಗೆ ದುಬೈನಲ್ಲಿ ಪ್ರಾಕ್ಟೀಸ್ ವೇಳೆ ಬ್ರೇಕ್ ಫೇಲ್ ಆಗಿ ಆಕ್ಸಿಡೆಂಟ್ ಆಗಿತ್ತು. ಅದೃಷ್ಟವಶಾತ್ ಅಜಿತ್‌ಗೆ ಏನೂ ಆಗಲಿಲ್ಲ.

ಇನ್ನೂ ‘ವಿಡಾಮುಯರ್ಚಿ’ ಮತ್ತು ‘ಗುಡ್, ಬ್ಯಾಡ್ & ಅಗ್ಲಿ’ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಿದ್ಧವಾಗಿದೆ.

Share This Article