ಯಶ್, ರಾಧಿಕಾರನ್ನು ಭೇಟಿಯಾದ ಅಜಯ್ ರಾವ್

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ (Toxic Film) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆ ಇದೀಗ ನಟ ಅಜಯ್ ರಾವ್ (Ajay Rao) ದಂಪತಿಯನ್ನು ಯಶ್ (Yash) ಭೇಟಿಯಾಗಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ:ತೆಲುಗು, ತಮಿಳು ಸಿನಿಮಾ ಒಪ್ಪಿಕೊಂಡ ಆಶಿಕಾ ರಂಗನಾಥ್

‘ಕೆಜಿಎಫ್’ (KGF) ಸಕ್ಸಸ್ ನಂತರ ಟಾಕ್ಸಿಕ್ ಚಿತ್ರಕ್ಕಾಗಿ ಯಶ್ ಬ್ಯುಸಿಯಾಗಿದ್ದರು. ಈಗ ಶೂಟಿಂಗ್ ಭರದಿಂದ ಸಾಗುತ್ತಿದೆ. ನಯಾ ಲುಕ್‌ನಲ್ಲಿ ಯಶ್ ಕಾಣಿಸಿಕೊಳ್ತಿದ್ದಾರೆ. ಇದರ ನಡುವೆ ಯಶ್ ಮನೆಗೆ ಅಜಯ್ ರಾವ್ ಭೇಟಿ ನೀಡಿ ಕೆಲ ಕಾಲ ಸಮಯ ಕಳೆದಿದ್ದಾರೆ. ಅಜಯ್ ರಾವ್ ಅವರ ಮನೆ ಗೃಹಪ್ರವೇಶಕ್ಕೆ ಆಹ್ವಾನ ನೀಡಲು ಯಶ್-ರಾಧಿಕಾರನ್ನು (Radhika Pandit) ಭೇಟಿ ಆಗಿದ್ದಾರೆ ಎನ್ನಲಾಗಿದೆ.

ಸದ್ಯ ವೈರಲ್ ಆಗಿರುವ ಫೋಟೋ ನೋಡಿ, ಯಶ್ ತುಂಬಾ ಸಣ್ಣ ಆಗಿದ್ದಾರೆ ಅಲ್ವಾ? ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಯಶ್ ಹೊಸ ಲುಕ್ ನೋಡಿ ಖುಷಿಪಟ್ಟಿದ್ದಾರೆ.

Share This Article