ಪಹಲ್ಗಾಮ್ ಉಗ್ರರ ದಾಳಿ: ಅಮಾಯಕರ ಹತ್ಯೆಯಿಂದ ಆಘಾತವಾಗಿದೆ ಎಂದ ಆಮೀರ್ ಖಾನ್

Public TV
1 Min Read

ಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿರೋದು ಆಮೀರ್ ಖಾನ್‌ಗೆ (Aamir Khan) ಆಘಾತವಾಗಿದೆ. ಈ ಹಿನ್ನೆಲೆ 30 ವರ್ಷಗಳ ಬಳಿಕ ಮರುಬಿಡುಗಡೆಯಾಗುತ್ತಿರುವ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾ ಪ್ರೀಮಿಯರ್ ಶೋಗೆ ಆಮೀರ್ ಗೈರಾಗಿದ್ದಾರೆ. ಇದನ್ನೂ ಓದಿ:ಮಹಾಭಾರತ ಸಿನಿಮಾ ಮಾಡೋದಾಗಿ ಘೋಷಿಸಿದ ಆಮೀರ್ ಖಾನ್

ಸಲ್ಮಾನ್ ಖಾನ್ ಜೊತೆ ಆಮೀರ್ ನಟಿಸಿದ್ದ ‘ಅಂದಾಜ್ ಅಪ್ನಾ ಅಪ್ನಾ’ ಸಿನಿಮಾ ಏ.25ರಂದು ಮರುಬಿಡುಗಡೆಯಾಗಿದೆ. ಈ ಚಿತ್ರದ ವಿಶೇಷ ಪ್ರದರ್ಶನಕ್ಕೆ ಇಡೀ ಚಿತ್ರತಂಡಕ್ಕೆ ಆಹ್ವಾನ ನೀಡಲಾಗಿತ್ತು. ಈ ಚಿತ್ರದ ಪ್ರೀಮಿಯರ್ ಶೋಗೆ ಆಮೀರ್ ಖಾನ್ ಗೈರಾಗಿದ್ದಾರೆ. ಅದರ ಗೈರಾಗಿದ್ದರ ಅಸಲಿ ಕಾರಣವನ್ನು ಆಮೀರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ತಾವು ಸಿನಿಮಾ ವಿಶೇಷ ಪ್ರದರ್ಶನಕ್ಕೆ ಬರುವ ಮನಸ್ಥಿತಿಯಲ್ಲಿ ಇರಲಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಏನಾಯ್ತು ಎಂದು ತಿಳಿದು ನೋವಾಗಿದೆ. ಅಮಾಯಕರ ಹತ್ಯೆಯಿಂದ ನನಗೆ ತೀವ್ರ ಆಘಾತವಾಗಿದೆ. ಈ ಸಂದರ್ಭದಲ್ಲಿ ನಾನು ನನ್ನ ಸಿನಿಮಾ ನೋಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಈ ವಾರದ ಕೊನೆಯಲ್ಲಿ ಸಿನಿಮಾ ನೋಡೋದಾಗಿ ತಿಳಿಸಿದ್ದಾರೆ ಆಮೀರ್ ಖಾನ್.

ಅಂದಹಾಗೆ, ಉಗ್ರರ ದಾಳಿ ಬಗ್ಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಂಗನಾ ರಣಾವತ್ ಸೇರಿದಂತೆ ಅನೇಕರು ಕೆಂಡಕಾರಿದ್ದಾರೆ. ದುಷ್ಟರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದ್ದಾರೆ.

Share This Article