ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದತಿ ಕುರಿತು ಜೂ.2ರ ಬಳಿಕ ಕ್ರಮ: ಕೇಂದ್ರ

Public TV
1 Min Read

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ ಮುಂದಿನ ಕ್ರಮವನ್ನು ಜೂ.2ರ ಬಳಿಕ ಕೈಗೊಳ್ಳುವುದಾಗಿ ವಿದೇಶಾಂಗ ಸಚಿವಾಲಯ (MEA) ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ಪಾಸ್‌ಪೋರ್ಟ್‌ ರದ್ದತಿ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿ ಆಧರಿಸಿ, ನಿಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ಏಕೆ ರದ್ದು ಮಾಡಬಾರದು? ಎಂದು ಪ್ರಶ್ನಿಸಿ ಮೇ 23 ರಂದು ಶೋಕಾಸ್ ನೋಟಿಸ್‌ ನೀಡಲಾಗಿದೆ. ಅದಕ್ಕೆ ಸ್ಪಷ್ಟಿಕರಣ ನೀಡಲು ಪ್ರಜ್ವಲ್ ರೇವಣ್ಣಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಜೈಸ್ವಾಲ್‌ ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ಪ್ರಜ್ವಲ್‌ ರೇವಣ್ಣ ಬಂಧನ: ಎಸ್‌ಐಟಿ ಮುಂದಿನ ತನಿಖೆ ಪ್ರಕ್ರಿಯೆ ಏನು?

10 ದಿನಗಳ ಒಳಗೆ ಪ್ರಜ್ವಲ್‌ ಸಮಂಜಸವಾಗಿ ಉತ್ತರಿಸದಿದ್ದಲ್ಲಿ ಮುಂದಿನ ಪ್ರಕ್ರಿಯೆಯನ್ನು ಜೂ.2ರ ಬಳಿಕ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಬಸ್‌ ಕಂದಕಕ್ಕೆ ಉರುಳಿ‌ 22 ಮಂದಿ ಸಾವು – ಮೃತರ ಕುಟುಂಬಗ್ಗೆ ತಲಾ 7 ಲಕ್ಷ ರೂ. ಪರಿಹಾರ ಘೋಷಣೆ!

Share This Article