8 ಕೋಟಿ ಹಗರಣದಲ್ಲಿ ಯಾರು ತಪ್ಪೆಸಗಿದ್ದಾರೋ ಅವರ ಮೇಲೆ ಕ್ರಮ: ಸಂತೋಷ್ ಲಾಡ್

Public TV
1 Min Read

ಬಾಗಲಕೋಟೆ: ಕಾರ್ಮಿಕ ಇಲಾಖೆಯಲ್ಲಿ (Department of Labor) ನಡೆದಿರುವ 8 ಕೋಟಿ ಹಣ ಹಗರಣದ (Scam) ಬಗ್ಗೆ ನಡೆಯುತ್ತಿರುವ ತನಿಖೆ ಅಂತಿಮ ಹಂತದಲ್ಲಿದ್ದು ಯಾರು ತಪ್ಪೆಸಗಿದ್ದಾರೋ ಅವರ ಮೇಲೆ ಕ್ರಮ ಆಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ (Santosh Lad) ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಣ ದುರ್ಬಳಕೆಯ ಹಗರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಖಂಡಿತವಾಗಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ತನಿಖೆಯಾಗಬೇಕು ಅಂತ ನಾನೇ ಬರೆದಿದ್ದೆ. ಸ್ವಲ್ಪ ವಿಳಂಬವಾಗಿದೆ ನಿಜ. ಆದರೆ ತಪ್ಪಿತಸ್ಥರು ಯಾರೇ ಇದ್ಧರೂ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ರಾಜ್ಯದ 7 ಕೋಟಿ ಜನರ ಸಮೀಕ್ಷೆ, ಜಾತಿ ತಾರತಮ್ಯ ನಿವಾರಿಸುವುದು ಗಣತಿಯ ಉದ್ದೇಶ: ಸಿಎಂ

 

ಕಾರ್ಮಿಕರಿಗೆ ಉಚಿತ ಬಸ್ ಪಾಸ್ (Free Bus Pass) ವಿಚಾರಕ್ಕೆ ಪ್ರತಿಕ್ರಿಯಿಸಿ, ಇಡೀ ಕರ್ನಾಟಕದಲ್ಲೇ ಈಗ ಮಹಿಳೆಯರಿಗೆ ಉಚಿತ ಬಸ್ಸು ಇದೆ. ಕಾರ್ಮಿಕರಿಗೆ ಉಚಿತ ಮಾಡುವುದು ಕಷ್ಟ. ನಮ್ಮ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಕೊಡಲು ದುಡ್ಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕಳ್ಳಾಟ: ರಾಹುಲ್ ಗಾಂಧಿ ಆರೋಪ

Share This Article