ನ್ಯಾಯಬೆಲೆ ಅಂಗಡಿಯಲ್ಲಿ ಟೋಕನ್ ಎಸೆದವನ ಮೇಲೆ ಕ್ರಮ: ಮುನಿಯಪ್ಪ

By
1 Min Read

ಬೆಂಗಳೂರು: ಟೋಕನ್ (Token) ಎಸೆದ ನ್ಯಾಯಬೆಲೆ ಅಂಗಡಿ (Ration Shop) ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ‘ಪಬ್ಲಿಕ್ ಟಿವಿ’ಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಮುನಿಯಪ್ಪ (KH Muniyappa) ಹೇಳಿದ್ದಾರೆ.

ವಿಧಾನಸೌಧದಲ್ಲಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ವೀಡಿಯೋ ನೋಡಿ ಪ್ರತಿಕ್ರಿಯಿಸಿದ ಅವರು, ನ್ಯಾಯಬೆಲೆ ಅಂಗಡಿ ಮಾಲೀಕನ ವಿರುದ್ಧ ಕ್ರಮದ ಭರವಸೆ ನೀಡಿದರು. ಇದನ್ನೂ ಓದಿ: ಒತ್ತುವರಿ ತೆರವು ವಿಚಾರ; ನಾವು ಕುಮಾರಸ್ವಾಮಿ ರಾಜೀನಾಮೆ ಕೇಳಲ್ಲ: ಚಲುವರಾಯಸ್ವಾಮಿ ಟಾಂಗ್

ಇನ್ನು ಅಕ್ಕಿ 10 ಕೆಜಿ ಕೊಡಬೇಕಾದ ಕಾರಣ ಸಮಸ್ಯೆ ಆಗಿದೆ ನಿಜ. ಒಟ್ಟು 15 ಕೆಜಿ ಅಕ್ಕಿ ಈ ತಿಂಗಳು ಕೊಡಬೇಕು. ಎಲ್ಲಾ ನ್ಯಾಯಬೆಲೆ ಅಂಗಡಿಗಳು ಬೀಗ ಹಾಕಿಲ್ಲ, ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ನೋ ಸ್ಟಾಕ್, ಬೀಗ ಹಾಕಿವೆ. ಈ ತಿಂಗಳ ಅಂತ್ಯದ ತನಕವೂ ಅಕ್ಕಿ ಕೊಡುತ್ತೇವೆ. ಅಕ್ಕಿ ಕೊರತೆ ಇಲ್ಲ, ಸರಬರಾಜು ವ್ಯತ್ಯಾಸ ಆಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಡ್ರಗ್ಸ್ ಸಾಗಾಟ ಕೇಸ್ – ದೆಹಲಿಯಲ್ಲಿ ತನಿಖೆ ಆರಂಭಿಸಿದ ಮಂಗಳೂರು ಪೊಲೀಸರು

Share This Article