ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿದ್ದರೆ ಕ್ರಮ: ಈಶ್ವರ ಖಂಡ್ರೆ

Public TV
2 Min Read

ಬೆಂಗಳೂರು/ಮಂಗಳೂರು: ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ, ಶವ ಹೂತಿರುವುದು ತನಿಖೆಯಿಂದ ಸಾಬೀತಾದರೆ, ಅರಣ್ಯ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲು ಅರಣ್ಯದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಥವಾ ಸಾರ್ವಜನಿಕ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಬೇಕಾದಲ್ಲಿ ನಿಯಮಾನುಸಾರ ಕ್ಲಿಯರೆನ್ಸ್ ಅನುಮತಿ (ಎಫ್‌ಸಿ) ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅರಣ್ಯದಲ್ಲಿ ಅಕ್ರಮವಾಗಿ ಶವ ಸಂಸ್ಕಾರ ಮಾಡಿರುವುದು ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆಯಿಂದ ಸಾಬೀತಾದರೆ ನಿಯಮಾನುಸಾರ ಕ್ರಮ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

ಇದೇ ವೇಳೆ ಸಿಎಜಿ ವರದಿ ಬಗ್ಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಕೇಂದ್ರದ ಮೋದಿ ಸರ್ಕಾರವನ್ನ ಕೇಳಲಿ. 200 ಲಕ್ಷ ಕೋಟಿ ರೂ. ಹಣವನ್ನು ಕೇಂದ್ರದ ಬಿಜೆಪಿ ಸಾಲ ತೆಗೆದುಕೊಂಡಿದೆ. ಯಾಕೆ ಇಷ್ಟು ಹಣ ಸಾಲ ತೆಗೆದುಕೊಂಡಿದ್ದಾರೆ ಕೇಳಿ? ನಾವು 7 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದೇವೆ. ಫಿಸಿಕಲ್ ರೆಸ್ಪಾನ್ಸಿಬಿಲಿಟಿ ಕಾಯ್ದೆ ಪ್ರಕಾರ ನಾವು ಮಿತಿ ಮೀರಿಲ್ಲ. ಗ್ಯಾರಂಟಿ ಯೋಜನೆ, ಬಡವರ ಬಲವರ್ಧನೆಗೆ ಉಪಯೋಗ ಮಾಡಿದ್ದೇವೆ. ಇಡೀ ದೇಶದಲ್ಲಿಯೇ ನಮ್ಮ ತಲಾ ಆದಾಯ, ಆರ್ಥಿಕತೆ ಹೋಲಿಸಿದ್ರೆ ಕರ್ನಾಟಕ ನಂ.1, ಇದರ ವರದಿ ಕೇಂದ್ರ ಸರ್ಕಾರ ಬಳಿಯೇ ಇದೆ. ನಮ್ಮ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ, ಜಗತ್ತಿಗೆ ಮಾದರಿಯಾಗಿವೆ. ನಾವು ಮಾಡಿದ ಗ್ಯಾರಂಟಿ ಯೋಜನೆಗಳನ್ನ ವಿಪಕ್ಷಗಳು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.

ಸಂಸದ ಸೆಂಥಿಲ್ ವಿರುದ್ಧ ಜನಾರ್ದನ ರೆಡ್ಡಿ ಆರೋಪ ವಿಚಾರವಾಗಿ ಮಾತನಾಡಿ, ಬಿಜೆಪಿಯವರ ಆರೋಪ ಯಾವಾಗಲೂ ಸುಳ್ಳು. ಸುಳ್ಳು ಹೇಳುವುದು ಅವರ ಚಾಳಿಯಾಗಿದೆ. ಜನರ ದಿಕ್ಕು ತಪ್ಪಿಸುವುದು ಅವರ ಕೆಲಸ. ಜನಾರ್ದನ ರೆಡ್ಡಿ ಹೇಳಿಕೆಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.

ಇನ್ನೂ ಗಣೇಶೋತ್ಸವ ಸಂಭ್ರಮದಲ್ಲಿ ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ. ನಾವು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದೇವೆ. ಇದು ಮಾಲಿನ್ಯ ನಿಯಂತ್ರಣ ಮಾಡುತ್ತದೆ. ಮಾಲಿನ್ಯ ಆಗಬಾರದು, ಪಿಒಪಿ ಬಳಕೆ ಬೇಡ. ರಾಸಾಯನಿಕ ಇರುತ್ತೆ, ನೀರಿನಲ್ಲಿ ಮುಳುಗುವುದಿಲ್ಲ. ರಾಸಾಯನಿಕ ಸೇವನೆಯಿಂದ ಜಲ ಮೂಲಗಳು ಸಾಯುತ್ತವೆ. ಅದರ ಸೇವನೆಯಿಂದ ಜನ ರೋಗಿಗಳಾಗುತ್ತಾರೆ. ಪಿಒಪಿ ಗಣಪ ಬೇಡ, ಮಣ್ಣಿನ ಗಣಪತಿಗೆ ಪೂಜೆ ಮಾಡಿ ಎಂದು ಒತ್ತಾಯಿಸಿದರು.ಇದನ್ನೂ ಓದಿ: ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

Share This Article