ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಖತರ್ನಾಕ್ ನಯ ವಂಚಕನೊಬ್ಬನ ಬಂಧನವಾಗಿದೆ.
ಸಿನಿಮಾ ಚಾನ್ಸ್ (Film Chance) ಕೊಡೋದಾಗಿ ಹೇಳಿ ವಂಚಿಸಿದ್ದ ಆರೋಪಿ ಧವನ್ ಸೋಹಾನನ್ನು ರಾಜಾಜಿನಗರ ಪೊಲೀಸರು (Rajajinagar Police) ಬಂಧಿಸಿದ್ದಾರೆ.
ಧವನ್ ಬರೋಬ್ಬರಿ 58 ಮಂದಿಗೆ ವಂಚನೆ ಮಾಡಿದ್ದಾನೆ. ಪ್ರಖ್ಯಾತ ಸಿನಿಮಾ ನಟ-ನಟಿಯರ ಜೊತೆ ರೀಲ್ಸ್ ಮತ್ತೆ ಫೋಟೋ ತೆಗೆಸಿಕೊಳ್ತಾನೆ. ಈತನ ವಂಚನೆಗೆ ಫೋಟೋ, ವೀಡಿಯೋಸ್‍ಗಳನ್ನೆ ಬಂಡವಾಳ ಮಾಡಿಕೊಳ್ತಾ ಇದ್ದ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಇಳಿಕೆ
ಆಕ್ಟಿಂಗ್ ಕ್ಲಾಸ್ ಗಾಗಿ ಪ್ಲೆಮಿಂಗೋ ಸೆಲೆಬ್ರಿಟೀಸ್ ವಲ್ಡ್ ಎಂಬ ಇನ್ಸ್ ಟಿಟ್ಯೂಟ್ ತೆರೆದಿದ್ದ ಆರೋಪಿ ಧವನ್, ಸಿನಿಮಾದಲ್ಲಿ ನಟಿಸಬೇಕಂಬ ಹಂಬಲ ಇರುವವರನ್ನು ಟಾರ್ಗೆಟ್ ಮಾಡುತ್ತಿದ್ದ. ಪ್ರತಿಭಾವಂತ ಯುವಕ ಯುವತಿಯರನ್ನ ನಂಬಿಸಿ ವಂಚನೆ ಮಾಡುತ್ತಿದ್ದ.
ಈ ಇನ್ಸ್ ಟ್ಯೂಟ್ ನಟನೆ ಕಲಿಯಲು ಬರುವವರಿಗೆ ವಂಚನೆ ಮಾಡಿದ್ದ. ಹೀಗೆ ಒಬ್ಬೊಬ್ಬರ ಬಳಿ 30 ರಿಂದ 50 ಸಾವಿರ ಪಡೆದು ವಂಚಿಸುತ್ತಿದ್ದ. ಇದೇ ರೀತಿ ಹಲವರಿಗೆ ಲಕ್ಷಾಂತರ ರೂಪಾಯಿ ವಂಚಿಸಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.