ನಟಿ ಜಾಕ್ವೆಲಿನ್ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ಭಾವುಕ ಪತ್ರ ಬರೆದ ಆರೋಪಿ ಸುಕೇಶ್

Public TV
2 Min Read

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez)ಇವತ್ತು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಹುಟ್ಟು ಹಬ್ಬಕ್ಕೆ ಬಹುಕೋಟಿ ವಂಚಕ ಆರೋಪಿ ಹಾಗೂ ಜಾಕ್ವೆಲಿನ್ ಬಾಯ್ ಫ್ರೆಂಡ್ ಆಗಿದ್ದ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜೈಲಿನಿಂದಲೇ (Jail) ಪತ್ರವೊಂದನ್ನು ಬರೆದಿದ್ದಾನೆ. ಕೈ ಬರಹದಿಂದಲೇ ಪತ್ರ ರೆಡಿಯಾಗಿದ್ದು, ಅತೀ ಶೀಘ್ರದಲ್ಲೇ ಬರುವುದಾಗಿ ತಿಳಿಸಿದ್ದಾನೆ.

ವಂಚನೆಯ ಕಾರಣದಿಂದಾಗಿ ಸದ್ಯ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್, ಆಗಾಗ್ಗೆ ಜಾಕ್ವೆಲಿನ್ ಗೆ ಪತ್ರಗಳನ್ನು ಬರೆಯುತ್ತಲೇ ಇದ್ದಾನೆ. ಇನ್ನೂ ಜಾಕ್ವೆಲಿನ್ ಮೇಲೆ ಪ್ರೀತಿ ಉಳಿಸಿಕೊಂಡಿರುವ ವಿಚಾರವನ್ನೂ ಅವನು ಹಂಚಿಕೊಂಡಿದ್ದಾನೆ. ಇಂದು ಕೂಡ ಜೈಲಿನಿಂದಲೇ ಒಂದು ಪತ್ರವನ್ನು ಬರೆದಿದ್ದಾನೆ. ಶೀಘ್ರದಲ್ಲೇ ಕಷ್ಟಗಳು ಕರಗಿ, ಮತ್ತೆ ನಾನು ಆಚೆ ಬರುವೆ. ಮುಂದಿನ ಸಲ ಮತ್ತೆ ಒಟ್ಟಿಗೆ ಹುಟ್ಟು ಹಬ್ಬ (Birthday) ಆಚರಿಸೋಣ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

ಸುಕೇಶ್ ನನ್ನ ಜೀವನ ನಾಶ ಮಾಡಿದ ಎಂದಿದ್ದ ಜಾಕ್ವೆಲಿನ್

ಕರ್ನಾಟಕ ಮೂಲದ ಸುಖೇಶ್ ಚಂದ್ರಶೇಖರ್ (Sukhesh Chandrasekhar) ಸ್ನೇಹದಿಂದಾಗಿ ನಾನು ನೆಮ್ಮದಿ ಕಳೆದುಕೊಂಡೆ ಎಂದಿದ್ದಾರೆ ಬಾಲಿವುಡ್ ನಟಿ ಹಾಗೂ ಕನ್ನಡದ ವಿಕ್ರಾಂತ್ ರೋಣ ಚಿತ್ರದ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez). ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಶ್ ಚಂದ್ರಶೇಖರ್ ಕಡೆಯಿಂದ ದುಬಾರಿ ಬೆಲೆಯ ಗಿಫ್ಟ್ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಜಾಕ್ವೆಲಿನ್ ಇಡಿ ವಿಚಾರಣೆಯನ್ನು ಎದುರಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕೋರ್ಟ್ ಮುಂದೆ ಹಾಜರಾಗಿದ್ದ ಜಾಕ್ವೆಲಿನ್ ಕಣ್ಣೀರಿಟ್ಟಿದ್ದಾರೆ. ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ಜೀವನವನ್ನು ಮಾತ್ರವಲ್ಲ, ವೃತ್ತಿ ಜೀವನವನ್ನೇ ಅವನು ಹದಗೆಡಿಸಿಬಿಟ್ಟಿದ್ದಾನೆ ಎಂದು ದೂರಿದ್ದಾರೆ. ಸುಖೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

ಪಿಂಕಿ ಇರಾನಿ (Pinky Irani) ಎನ್ನುವ ಹೆಣ್ಣುಮಗಳು ಸುಖೇಶ್ ನನ್ನು ಗೃಹ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿದರು. ಈ ಪರಿಚಯ ಸ್ನೇಹವಾಯಿತು. ಆತ್ಮೀಯತೆ ಬೆಳೆಯಿತು. ಸುಖೇಶ್ ನಿಂದ ಕೆಲವು ಗಿಫ್ಟ್ ಗಳು ಬಂದಿದ್ದು ಪಿಂಕಿ ಇರಾನಿ ಕಡೆಯಿಂದ. ಸುಖೇಶ್ ಬಗ್ಗೆ ವಿಷಯ ಗೊತ್ತಿದ್ದರೂ, ಆಕೆ ನನ್ನಿಂದ ಎಲ್ಲವನ್ನೂ ಮುಚ್ಚಿಟ್ಟರು. ಅವನು ನನ್ನ ದೊಡ್ಡ ಅಭಿಮಾನಿ ಎಂದು ಸುಳ್ಳು ಹೇಳಿದ್ದರು ಎಂದು ಕೋರ್ಟ್ ನಲ್ಲಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

 

ಸುಖೇಶ್ ಪ್ರಕರಣದಿಂದಾಗಿ ಜಾಕ್ವೆಲಿನ್ ಹೈರಾಣಾಗಿದ್ದಾರೆ. ಈ ಕಡೆ ಜಾರಿ ನಿರ್ದೇಶನಾಲಯದ ತನಿಖೆ, ಆ ಕಡೆ ಮರ್ಯಾದೆ ಎರಡನ್ನೂ ಕಳೆದುಕೊಂಡಿದ್ದು ಸುಸ್ತಾಗಿದ್ದಾರಂತೆ. ಪಾಸ್ಟ್ ಪೋರ್ಟ್ ಪೊಲೀಸ್ ವಶದಲ್ಲಿ ಇರುವುದರಿಂದ ನೆಮ್ಮೆಯಿಂದ ಹೊರದೇಶಕ್ಕೂ ಅವರಿಗೆ ಹೋಗಲು ಆಗುತ್ತಿಲ್ಲವಂತೆ. ಒಟ್ನಲ್ಲಿ ಸುಖೇಶ್ ಪ್ರಕರಣ ಅವರನ್ನು ನಿದ್ದೆಗೆಡಿಸಿದ್ದಂತೂ ನಿಜ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್