– ಹಾಸನ ನ್ಯಾಯಾಲಯಕ್ಕೆ ಎಸ್‌ಐಟಿಯಿಂದ 13,712 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಬೆಂಗಳೂರು/ ಹಾಸನ: ಮಾಜಿ ಆಪ್ತ ವ್ಯಕ್ತಿಗಳೇ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಖೆಡ್ಡಾ ತೊಡಿದ ವಿಚಾರ ಆರೋಪಪಟ್ಟಿಯಲ್ಲಿ(Chargesheet) ಉಲ್ಲೇಖವಾಗಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಸಿವಿಲ್ ಕೋರ್ಟ್‌ಗೆ ವಿಶೇಷ ತನಿಖಾ ತಂಡ (SIT) 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ.
ವಿಡಿಯೋ ವೈರಲ್ ಪ್ರಕರಣದಲ್ಲಿ ಒಟ್ಟು 52 ಮಂದಿ ಹೆಸರು ಉಲ್ಲೇಖಿಸಲಾಗಿದ್ದು, 39 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಲೋಕಸಭೆ ಚುನಾವಣೆ (Lok Sabha Election) ವೇಳೆ 70 ಪೆನ್‌ಡ್ರೈವ್ (Pendrive) ಖರೀದಿಸಿ ವಿಡಿಯೋ ವೈರಲ್ (Video Viral) ಮಾಡಿದ್ದು ತನಿಖೆ ವೇಳೆ ಬಯಲಾಗಿದೆ. ಇದನ್ನೂ ಓದಿ: ಕನ್ನಡಿಗ ಪಡೆದಿದ್ದ ರ‍್ಯಾಂಕ್ ತನ್ನದೆಂದು ಹೇಳಿ ಸನ್ಮಾನ – ಬಿಹಾರದ ಯುವಕ ಅರೆಸ್ಟ್
ಆರೋಪ ಪಟ್ಟಿಯಲ್ಲಿ ಏನಿದೆ?
ಪ್ರಜ್ವಲ್ ಜೊತೆ ಇದ್ದ ನವೀನ್‌ಗೌಡ, ಕಾರ್ತಿಕ್, ಚೇತನ್, ಹರೀಶ್ ಮತ್ತು ಕಾರು ಚಾಲಕ ಕಾರ್ತಿಕ್‌ಗೆ ಎಲ್ಲ ವ್ಯವಹಾರ ಗೊತ್ತಿತ್ತು. ಪ್ರಜ್ವಲ್ ಮೊಬೈಲ್‌ನಿಂದ ಕಾರ್ತಿಕ್ ವಿಡಿಯೋವನ್ನು ಕದ್ದು ಜೆಡಿಎಸ್ ಕಾರ್ಯಕರ್ತರಾಗಿದ್ದ ನವೀನ್, ಚೇತನ್ ನೀಡಿದ್ದ.
ಚುನಾವಣೆಯಲ್ಲಿ ಸಹಾಯ ಮಾಡಿದ್ದರಿಂದ ಪಕ್ಷ ತೊರೆದು ನವೀನ್, ಚೇತನ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಹರೀಶ್ ಪ್ರಜ್ವಲ್ ಕುಟುಂಬದ ಆಡಿಟಿಂಗ್ ಕೆಲಸ ಮಾಡುತ್ತಿದ್ದ.
ಅಶ್ಲೀಲ ವಿಡಿಯೋ ಬಗ್ಗೆ ದೇವರಾಜೇಗೌಡ ಹೇಳಿಕೆ ಬಳಿಕ ಕಾರ್ತಿಕ್‌ನನ್ನು ಸಂಪರ್ಕಿಸಿ ವಿಡಿಯೋವನ್ನು ಆರೋಪಿಗಳು ಪಡೆದಿದ್ದಾರೆ.ಶಾಸಕ ಸ್ವರೂಪ್ ಸಂಬಂಧಿ ರೇವಂತ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

